ಗಾಂಜಾ ವ್ಯವಹಾರ ಮಾಡುತ್ತಿದ್ದ ನಗರದ ಪ್ರತಿಷ್ಠಿತ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳ ಸೆರೆ

Spread the love

ಗಾಂಜಾ ವ್ಯವಹಾರ ಮಾಡುತ್ತಿದ್ದ ನಗರದ ಪ್ರತಿಷ್ಠಿತ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳ ಸೆರೆ

ಮಂಗಳೂರು: ಗಾಂಜಾ ವ್ಯವಹಾರ ಮಾಡುತ್ತಿದ್ದ ಮಣಿಪುರ ಮೂಲದ ನಾಲ್ಕು ಮಂದಿ ವಿದ್ಯಾರ್ಥಿಗಳನ್ನು ಬುಧವಾರ ರಾತ್ರಿ ಸಿಐಡಿ ಪೋಲಿಸರು ಬಂಧಿಸಿದ್ದಾರೆ.

ಬಂದಿತರನ್ನು ರೋಹಿತ್, ಶರತ್ ಸಿಂಗ್, ಕೆನೆಬತ್ ಮತ್ತು ಯಹಿಮಾ ಎಂದು ಗುರುತಿಸಲಾಗಿದ್ದು, ಬಂಧಿತ ವಿದ್ಯಾರ್ಥಿಗಳು ಮಂಗಳೂರಿನಿ ವಿವಿಧ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಪೋಲಿಸ್ ಮೂಲಗಳ ಪ್ರಕಾರ ಬಂಧಿತ ವಿದ್ಯಾರ್ಥಿಗಳು ನಗರದ ವಿವಿಧ ಕಾಲೇಜುಗಳಲ್ಲಿ ಗಾಂಜಾ ವ್ಯವಹಾರ ನಡೆಸುತ್ತಿದ್ದು, ಪೋಲಿಸರು ಅವರ ವ್ಯವಹಾರದ ಮೇಲೆ ಕಣ್ಣಟ್ಟಿದ್ದರು. ಬುಧವಾರ ಸಿಐಡಿ ಪೋಲಿಸರು ಕೊಡಿಯಾಲ್ ಗುತ್ತು ಎಂಬಲ್ಲಿ ವಿದ್ಯಾರ್ಥಿಗಳು ಗಾಂಜಾ ವ್ಯವಹಾರ ನಡೆಸುತ್ತಿದ್ದ ವೇಳೆ ಧಾಳಿ ನಡೆಸಿ ಬಂಧಿಸಿದ್ದಾರೆ.

ಬಂಧಿತರಿಂದ 1.1 ಕೆಜಿ ಗಾಂಜಾ, ರೂ 10000 ನಗದು, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಮುಂದಿನ ವಿಚಾರಣೆಗಾಗಿ ಬರ್ಕೆ ಪೋಲಿಸರಿಗೆ ಹಸ್ತಾಂತರಿಸಲಾಗಿದೆ.


Spread the love