ಗೃಹ ಸಚಿವ ಪರಮೇಶ್ವರ್ ಹುಟ್ಟುಹಬ್ಬ: ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಪೂಜೆ

Spread the love

ಗೃಹ ಸಚಿವ ಪರಮೇಶ್ವರ್ ಹುಟ್ಟುಹಬ್ಬ: ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ

ಮಂಗಳೂರು: ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ 74ನೇ ಹುಟ್ಟುಹಬ್ಬದ ಪ್ರಯುಕ್ತ ಇಂದು ಬುಧವಾರ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರೇಮ್ ನಾಥ್ ಪಿ.ಬಿ ಬಳ್ಳಾಲ್ ಭಾಗ್ ರವರ ನೇತೃತ್ವದಲ್ಲಿ ಬುಧವಾರ ನಗರದ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ ನೆರವೇರಿಸಲಾಯಿತು.

ಬಳಿಕ ನೆಹರು ಮೈದಾನ, ವೆನ್ ಲಾಕ್ ಆಸ್ಪತ್ರೆ ಬಳಿ ಸಾರ್ವಜಿನಿಕ ಅನ್ನಸಂತರ್ಪಣೆ ನೆರವೇರಿಸಲಾಯಿತು.

ಈ ಸಂದರ್ಭ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ದಿನೇಶ್ ಮೂಳೂರು, ಜಿಲ್ಲಾ ಹಿಂದೂ ಧಾರ್ಮಿಕ ದತ್ತಿ ಪರಿಷತ್ ಸದಸ್ಯೆ ಚಂದ್ರಕಲಾ ಡಿ ರಾವ್, ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ನಾಮನಿರ್ದೇಶನ ಸದಸ್ಯರಾದ ಹರಿನಾಥ್ ಜೋಗಿ, ರಾಜೇಂದ್ರ ಚಿಲಿಂಬಿ, ಕಿರಣ್ ಕುಮಾರ್ ಕೊಡಿಯಾಲ್ ಬೈಲ್, ಮುಖಂಡರಾದ ಭರತ್ ಬಳ್ಳಾಲ್ ಭಾಗ್, ಮೇಘರಾಜ್, ರಶ್ಮಿತಾ ಆರ್.ಕೆ, ಕೀರ್ತನ್, ಗಗನ್, ಅಮೋಗ್, ವೀಕ್ಷಿತ್, ಸೃಜನ್, ಆದಿತ್ಯ, ರಿತೇಶ್, ಸೀತರಾಮ್, ಸುಮಂತ್, ಅಶ್ವಿನ್, ಹರ್ಷ, ರಫಿ, ವಿನಿತ್ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments