ಛತ್ತೀಸ್‌ಗಢದಲ್ಲಿ ಇಬ್ಬರು ಕ್ಯಾಥೊಲಿಕ್ ಸನ್ಯಾಸಿನಿಯರ  ಬಂಧನ:  ಮಂಗಳೂರು ಕ್ಯಾಥೊಲಿಕ್ ಧರ್ಮಪ್ರಾಂತ್ಯ ಖಂಡನೆ

Spread the love

ಛತ್ತೀಸ್‌ಗಢದಲ್ಲಿ ಇಬ್ಬರು ಕ್ಯಾಥೊಲಿಕ್ ಸನ್ಯಾಸಿನಿಯರ  ಬಂಧನ:  ಮಂಗಳೂರು ಕ್ಯಾಥೊಲಿಕ್ ಧರ್ಮಪ್ರಾಂತ್ಯ ಖಂಡನೆ

ಮಂಗಳೂರು ಕ್ಯಾಥೊಲಿಕ್ ಧರ್ಮಪ್ರಾಂತ್ಯವು, ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ನಡೆದ ಇಬ್ಬರು ಕ್ಯಾಥೊಲಿಕ್ ಧಾರ್ಮಿಕ ಸನ್ಯಾಸಿನಿಯರ ವಿರುದ್ಧದ ಅಕ್ರಮ ದಾಳಿ ಮತ್ತು ಬಂಧನದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸುತ್ತದೆ ಹಾಗೂ ಖಂಡಿಸುತ್ತದೆ. ಬಲಪಂಥೀಯ ಕೋಮುವಾದಿಗಳಿಂದ ಪ್ರಚೋದಿತವಾಗಿ ಈ ಘಟನೆ ನಡೆದಿರುವುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಇದು ಧಾರ್ಮಿಕ ಸ್ವಾತಂತ್ರö್ಯ, ಮಾನವ ಗೌರವ ಮತ್ತು ವಿಶೇಷವಾಗಿ ಮಹಿಳೆಯರ ಗೌರವವನ್ನು ತೀವ್ರವಾಗಿ ಹಾನಿಗೊಳಿಸುವ ಗಂಭೀರ ಘಟನೆಯಾಗಿದೆ.

ಈ ಅಕ್ರಮ ಘಟನೆ 25 ಜುಲೈ 2025ರಂದು ಛತ್ತೀಸ್‌ಗಢದ ದುರ್ಗ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಇಬ್ಬರು ಸನ್ಯಾಸಿನಿಯರು ಹಾಗೂ ಮೂರನೇ ವ್ಯಕ್ತಿಯೊಬ್ಬರು ಮೂವರು ಯುವತಿಯರೊಂದಿಗೆ ಪ್ರಯಾಣಿಸುತ್ತಿದ್ದು, ಆ ಯುವತಿಯರೆಲ್ಲರೂ 18 ವರ್ಷದ ಮೇಲಿನವರು ಮಾತ್ರವಲ್ಲದೆ, ಅವರ ಪೋಷಕರ ಸಂಪೂರ್ಣ ಜ್ಞಾನ ಮತ್ತು ಲಿಖಿತ ಅನುಮತಿಯೊಂದಿಗೆ ಪ್ರಯಾಣಿಸುತ್ತಿದ್ದರು. ಆದರೂ, ಅವರನ್ನು ಅಕ್ರಮವಾಗಿ ಬಂಧಿಸಿ ದೌರ್ಜನ್ಯ ಮಾಡಲಾಗಿದೆ ಎನ್ನಲಾಗುತ್ತಿದೆ. ಅದಕ್ಕಿಂತ ಬೇಸರಕರ ಸಂಗತಿಯೆAದರೆ, ಯುವತಿಯರ ಪೋಷಕರು ನಿಲ್ದಾಣಕ್ಕೆ ಬಂದ ಬಳಿಕವೂ, ಪೊಲೀಸರೇ ಅವರನ್ನು ತಮ್ಮ ಮಗಳ ಬಳಿ ಹೋಗಲು ನಿರ್ಬಂಧಿಸಿದರು. ಇನ್ನೂ ಆತಂಕಕಾರಿ ವಿಷಯವೆಂದರೆ, ಮೂಲ ಎಫ್‌ಐಆರ್‌ನಲ್ಲಿ ಲಭ್ಯವಿರದ ಧರ್ಮಾಂತರ ನಿಷೇಧ ಕಾಯ್ದೆ (ಛತ್ತೀಸ್‌ಗಢ ಧಾರ್ಮಿಕ ಸ್ವಾತಂತ್ರ÷್ಯ ಅಧಿನಿಯಮ, 1968) ರಚನೆಯ 4ನೇ ವಿಭಾಗವನ್ನು ನಂತರ ಅಕ್ರಮವಾಗಿ ಸೇರಿಸುವ ಮೂಲಕ ಕಾನೂನು ಪ್ರಕ್ರಿಯೆಯ ದುರುಪಯೋಗ ಮತ್ತು ಜಾಣ್ಮೆಯುತ ಹಸ್ತಕ್ಷೇಪ ನಡೆಯುತ್ತಿದೆ ಎಂಬ ಶಂಕೆ ತೀವ್ರವಾಗುತ್ತದೆ. ಬಲಪಂಥೀಯ ಗುಂಪುಗಳ ಬೆದರಿಕೆಗೆ ಗುರಿಯಾಗಿರುವ ಅಥವಾ ಅವರೊಂದಿಗೆ ಷಡ್ಯಂತ್ರದಲ್ಲಿ ಪಾಲುಗಾರರಾಗಿರುವ ಪೊಲೀಸರು, ನಿಷ್ಕಪಟ ನಾಗರಿಕರನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಭಾರತದಲ್ಲಿ ಕ್ರೆöÊಸ್ತರ ಮೇಲಿನ ಹಲ್ಲೆಗಳು ಹೆಚ್ಚುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಘಟನೆ ಧಾರ್ಮಿಕ ಅಸಹಿಷ್ಣುತೆ ಮತ್ತು ಕಾನೂನಿನ ಅಸಮರ್ಪಕ ನಿರ್ವಹಣೆಯ ಆತಂಕಕಾರಿ ಉದಾಹರಣೆಯಾಗಿದೆ.

ಈ ರೀತಿಯ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸಬೇಕು. ಪ್ರಾರ್ಥನೆ, ಶಿಕ್ಷಣ ಮತ್ತು ಸೇವೆಗೆ ತಮ್ಮ ಜೀವನವನ್ನೇ ಅರ್ಪಿಸಿದ ಮಹಿಳಾ ಧಾರ್ಮಿಕ ಸನ್ಯಾಸಿನಿಯರ ಮೇಲೆ ನಡೆಯುವ ಈ ರೀತಿಯ ಗಂಭೀರ ನಡೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಖಂಡನೀಯ ಹಾಗೂ ಅಸಹನೀಯ. ಈ ರೀತಿ ಕೆಲವು ಗುಂಪುಗಳ ಒತ್ತಡಕ್ಕೆ ಮಣಿದು ಕಾನೂನನ್ನು ದುರುಪಯೋಗ ಪಡಿಸುವುದು ಭಾರತ ಸಂವಿಧಾನದ ಧಾರ್ಮಿಕ ಸ್ವಾತಂತ್ರö್ಯಕ್ಕೆ (ಅನುಚ್ಛೇದÀ 25) ತೀರ ದಕ್ಕೆ ತರುತ್ತದೆ. ಈ ಘಟನೆ ಕೇವಲ ಕಾನೂನು ಉಲ್ಲಂಘನೆಯಷ್ಟೇ ಅಲ್ಲ, ಇದು ಶಾಂತಿ, ಏಕತೆ ಮತ್ತು ಪರಸ್ಪರ ಗೌರವ ಎಂಬ ಭಾರತೀಯ ಮೌಲ್ಯಗಳ ಧಿಕ್ಕಾರವಾಗಿದೆ.

ಮಂಗಳೂರು ಧರ್ಮಪ್ರಾಂತ್ಯವು ಈ ಕೆಳಕಂಡ ತಕ್ಷಣದ ಕ್ರಮಗಳನ್ನು ಆಗ್ರಹಿಸುತ್ತಿದೆ:
1. ಬಂಧಿತ ಸನ್ಯಾಸಿನಿಯರ ತಕ್ಷಣದ ಮತ್ತು ನಿರ್ವ್ಯಾಜ್ಯ ಬಿಡುಗಡೆ, ಜೊತೆಗೆ ಅವರ ನಿರ್ದೋಷಿತ್ವದ ಸಾರ್ವಜನಿಕ ಘೋಷಣೆ.
2. ಪೊಲೀಸರ ಹಾಗೂ ಗುಂಪು ಹಲ್ಲೆಗೆ ಸಂಬAಧಿಸಿದ ಎಲ್ಲ ವ್ಯಕ್ತಿಗಳ ಮೇಲಿನ ನ್ಯಾಯಾಂಗ ತನಿಖೆ.
3. ಭಯ ಮತ್ತು ದ್ವೇಷದ ವಾತಾವರಣವನ್ನು ಹರಡಲು ಧರ್ಮಾಂತರ ವಿರೋಧಿ ಕಾನೂನುಗಳನ್ನು ದುರುಪಯೋಗ ಪಡಿಸುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ.
4. ಛತ್ತೀಸ್‌ಗಢ ಸರ್ಕಾರದಿಂದ ಎಲ್ಲ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆ, ಗೌರವ ಮತ್ತು ಹಕ್ಕುಗಳ ರಕ್ಷಣೆಗೆ ದೃಢ ಭರವಸೆ.

ಮಂಗಳೂರು ಧರ್ಮಪ್ರಾಂತ್ಯವು, ಅನ್ಯಾಯ ಪೀಡಿತರ ಜೊತೆ ಸಾಂತ್ವನವಾಗಿ ನಿಂತಿದ್ದು, ಶಾಂತಿ, ನ್ಯಾಯ ಮತ್ತು ಮಾನವ ಗೌರವಕ್ಕಾಗಿ ಹೋರಾಟವನ್ನು ಮುಂದುವರಿಸುತ್ತಿದೆ. ನಾಗರಿಕ ಸಮಾಜ, ಧರ್ಮೀಯ ನಾಯಕರು, ಮಾನವ ಹಕ್ಕು ಸಂಘಟನೆಗಳು ಮತ್ತು ಜವಾಬ್ದಾರಿಯುತ ನಾಗರಿಕರನ್ನು ಈ ಅನ್ಯಾಯಗಳ ವಿರುದ್ಧ ಧೈರ್ಯದಿಂದ ಧ್ವನಿ ಎತ್ತಲು ನಾವು ಕರೆ ನೀಡುತ್ತೇವೆ. ನ್ಯಾಯ ಮತ್ತು ಶಾಂತಿ ನಮ್ಮ ದೇಶದಲ್ಲಿ ನೆಲೆಸಲಿ ಎಂಬುವುದೇ ನಮ್ಮ ಆಶಯ.


Spread the love
Subscribe
Notify of

0 Comments
Inline Feedbacks
View all comments