ಛಾಯಾಚಿತ್ರಗಳ ಪ್ರದರ್ಶನ ದರ್ಶನ ಗೋಪುರಮ್ ಗೆ ಪಲಿಮಾರು ಸ್ವಾಮೀಜಿ ಚಾಲನೆ

Spread the love

ಛಾಯಾಚಿತ್ರಗಳ ಪ್ರದರ್ಶನ ದರ್ಶನ ಗೋಪುರಮ್ ಗೆ ಪಲಿಮಾರು ಸ್ವಾಮೀಜಿ ಚಾಲನೆ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ,ಪರ್ಯಾಯ ಶ್ರೀ ಪಲಿಮಾರು ಮಠದ ಮಹತ್ತರ ಯೋಜನೆಯಾದ ಸುವರ್ಣಗೋಪುರ ಶಿಖರ ಪ್ರತಿಷ್ಠಾ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪ್ರೆಸ್ ಛಾಯಾಚಿತ್ರಗ್ರಾಹಕರಿಂದ ಸಂಗ್ರಹಿಸಿದ ಛಾಯಾಚಿತ್ರಗಳ ಪ್ರದರ್ಶನ ದರ್ಶನ ಗೋಪುರಮ್ ಇದನ್ನು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸೋಸಲೆ ವ್ಯಾಸರಾಜ ಮಠಾಧೀಶರಾದ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದರ ಛಾಯಾಚಿತ್ರವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವುದರ ಮೂಲಕ ಉದ್ಘಾಟನೆ ಮಾಡಿ ನಂತರ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಪರ್ಯಾಯ ಮಠದ ಪ್ರಹಲ್ಲಾದ್ ರಾವ್, ಗಿರೀಶ ಆಚಾರ್ಯ, ಶೇಷಗಿರಿ ರಾವ್, ಛಾಯಾಚಿತ್ರಗ್ರಾಹಕರಾದ ಜನಾರ್ಧನ್ ಕೊಡವೂರು, ಪರಶುರಾಮ ಭಟ್ ಮೊದಲಾದವರು ಉಪಸ್ಥಿತರಿದ್ದರು.


Spread the love