ಜರ್ಮನ್ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಯುವಕನ ಬಂಧನ

Spread the love

ಜರ್ಮನ್ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಯುವಕನ ಬಂಧನ
ಮಂಗಳೂರು: ಜರ್ಮನ್ ವಿದ್ಯಾರ್ಥಿನಿಯೋರ್ವಳಿಗೆ ಕಿರುಕುಳ ನೀಡಿದ ದೂರಿನ ಮೇಲೆ ಉಳ್ಳಾಲ ಪೋಲಿಸರು  ಯುವಕನೋರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಹರೇಕಳ ನಿವಾಸಿ ಮಹಮ್ಮದ್ ಮುಸ್ತಾಫ ಎಂದು ಗುರುತಿಸಲಾಗಿದೆ.
ಜರ್ಮನ್ ವಿದ್ಯಾರ್ಥಿನಿಯು ನಗರದ ಆಶ್ರಮದಲ್ಲಿ ಶೈಕ್ಷಣಿಕ ತರಬೇತಿಗಾಗಿ ಬಂದಿದ್ದು, ಶನಿವಾರ ಆಕೆಗೆ ಮುಸ್ತಾಫ ಕಿರುಕುಳ ನೀಡಿದ್ದ ಎನ್ನಲಾಗಿದೆ, ಈ ವೇಳೆ ಭಯದಿಂದ ವಿದ್ಯಾರ್ಥಿನಿಯು ಕೂಗಿಕೊಂಡಿದ್ದು ಇತರ ವಿದ್ಯಾರ್ಥಿಗಳು ಯುವಕನನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.
ಯುವಕನ  ವಿರುದ್ದ ಪ್ರಕರಣ ದಾಖಲಾಗಿದೆ

Spread the love