ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲು  ಬಗ್ಗೆ‌ ಮುಖ್ಯಮಂತ್ರಿಗಳಿಗೆ ಮನವಿ

Spread the love

ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲು  ಬಗ್ಗೆ‌ ಮುಖ್ಯಮಂತ್ರಿಗಳಿಗೆ ಮನವಿ

ಜ್ಞಾನ ಸಂಜೀವಿನಿ ವತಿಯಿಂದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಿಲ್ಲೆಯಲ್ಲಿರುವ ಕೈಗಾರಿಕೆಗಳಲ್ಲಿ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಪದವಿ ಪಡೆದ ಜಿಲ್ಲೆಯ ಪದವಿದಾರರಿಗೆ ಉದ್ಯೋಗ ನೀಡುವಲ್ಲಿ ಮೊದಲ ಆದ್ಯತೆ ನೀಡಬೇಕೆಂದು ಮನವಿ ಮಾಡಲಾಯಿತು.

ಈ ವಿಷಯ ಅವರ ಗಮಕ್ಕೆ ಬಂದಿದ್ದು ಅದರ ಬಗ್ಗೆ ಸರಕಾರ ಗಮನ ಹರಿಸಿ ಪ್ರಯತ್ನ ಮಾಡುತ್ತಿದೆ ಹಾಗು ಆಯಾಯ ಜಿಲ್ಲೆಯ ಪದವಿದಾರರಿಗೆ ಉದ್ಯೋಗ ಪಡೆಯಲು ಅನುಕೂಲ ಆಗುವಂತೆ ಸರಕಾರ ರಾಜ್ಯ ವ್ಯಾಪಿ ಕೈಗಾರಿಕಾ ನೀತಿಯನ್ನು ಮಾಡುವಲ್ಲಿ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಜೀವನ್ ರೈ, ಸಾಕ್ಷಾತ್ ಶೆಟ್ಟಿ, ಸ್ವಸ್ತಿಕ್ ಆಳ್ವ, ವಿನೀತ್ ಪುತ್ರನ್, ಪ್ರಜ್ವಲ್ ಶೇಣವ ಮತ್ತು ಕೀರ್ತನ್ ದಾಸ್ ಉಪಸ್ಥಿತರಿದ್ದರು.


Spread the love