ಡಿ. 2 : ಶ್ರೀ ಪೇಜಾವರ ಗುರುವಂದನ- ಕಾರ್ಯಾಲಯ ಉದ್ಘಾಟನೆ

Spread the love

 ಡಿ. 2 : ಶ್ರೀ ಪೇಜಾವರ ಗುರುವಂದನ- ಕಾರ್ಯಾಲಯ ಉದ್ಘಾಟನೆ

ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಷಷ್ಟ್ಯಬ್ದ ಅಭಿವಂದನ ಸಮಾರಂಭದ ಹಿನ್ನೆಲೆಯಲ್ಲಿ ಶ್ರೀ ಪೇಜಾವರ ಗುರುವಂದನ ಸಮಿತಿ ಕಾರ್ಯಾಲಯದ ಉದ್ಘಾಟನೆಯು ದಿನಾಂಕ ಡಿ. 2 ಶನಿವಾರ ಸಂಜೆ 5.30 ಕ್ಕೆ ಶ್ರೀ ಪೇಜಾವರ ಮಠದ ಆವರಣದಲ್ಲಿರುವ ಶ್ರೀ ಅಧೋಕ್ಷಜ ಮಂದಿರ ಛತ್ರದಲ್ಲಿ ನಡೆಯಲಿದೆ .

ಶ್ರೀಕೃಷ್ಣಮಠದ ದಿವಾನರಾದ  ವರದರಾಜ ಭಟ್ ಮತ್ತು ಉದ್ಯಮಿಗಳೂ ಹಾಗೂ ಸಾಮಾಜಿಕ ಧುರೀಣರೂ ಆಗಿರುವ  ಸಾಧು ಸಾಲ್ಯಾನ್ ಮತ್ತು  ಅಜಯ್ ಪಿ ಶೆಟ್ಟಿ ಉದ್ಘಾಟಿಸಲಿದ್ದಾರೆ ಎಂದು ಸಮಿತಿ ಅಧ್ಯಕ್ಷ , ಶಾಸಕ ಯಶ್ ಪಾಲ್ ಎ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love