ಡೆರಿಕ್ ಸ್ಕೂಲಿನಲ್ಲಿ ಬೇಸಿಗೆ ರಜೆಯ ಪ್ರಯುಕ್ತ ಚೆಸ್ ತರಬೇತಿ ಶಿಬಿರ

Spread the love

ಡೆರಿಕ್ ಚೆಸ್ ಸ್ಕೂಲಿನಲ್ಲಿ ಬೇಸಿಗೆ ರಜೆಯ ಪ್ರಯುಕ್ತ ಚೆಸ್ ತರಬೇತಿ ಶಿಬಿರ

ಮಂಗಳೂರು: ಡೆರಿಕ್ಸ್ ಚೆಸ್ ಸ್ಕೂಲಿನ ವತಿಯಿಂದ ಬೇಸಿಗೆ ರಜೆಯ ಪ್ರಯುಕ್ತ ಏಪ್ರೀಲ್ ಮತ್ತು ಮೇ ತಿಂಗಳಲ್ಲಿ ಮಂಗಳೂರು ಮತ್ತು ಉಡುಪಿಯಲ್ಲಿ ಚದುರಂಗ ತರಬೇತಿ ಶಿಬಿರವು ಜರುಗಲಿರುವುದು. ಆರಂಭಿಕ, ಮಾಧ್ಯಮಿಕ ಹಾಗೂ ಫ್ರೌಢ ಹಂತಗಳಲ್ಲಿ ತರಬೇತಿ ಪಡೆಯುವ ಅವಕಾಶವಿದ್ದು ಏಪ್ರೀಲ್ 3ರಿಂದ ಪ್ರಥಮ ಹಂತದ ಶಿಬಿರ ಆರಂಭಗೊಳ್ಳಲಿದೆ.

ಮಂಗಳೂರಿನ ಎಂ.ಜಿ.ರೋಡ್ (0824-4277273) ಹಾಗೂ ಉಡುಪಿಯ ಕುಂಜಿಬೆಟ್ಟುನಲ್ಲಿರುವ (0820-4295749) ಡೆರಿಕ್ಸ್ ಚೆಸ್ ಸ್ಕೂಲಿನಲಿ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು. ಉದಯೋನ್ಮುಖ ಪ್ರತಿಭೆಗಳನ್ನು ಆಟಕ್ಕೆ ಪರಿಚಯಿಸಿ ಉತ್ತಮ ನಿರ್ವಹಣೆಗಾಗಿ ಪ್ರೋತ್ಸಾಹಿಸಲಾಗುವುದು. ಆಸಕ್ತರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರಲಾಗಿದೆ.


Spread the love