ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಅಣ್ಣಾಮಲೈ ನೇಮಕ

Spread the love

ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಅಣ್ಣಾಮಲೈ ನೇಮಕ

ಚೆನ್ನೈ: ಆಗಸ್ಟ್ 25 ರಂದು ಭಾರತೀಯ ಜನತಾ ಪಕ್ಷ ಸೇರಿಕೊಂಡ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇದೀಗ ತಮಿಳುನಾಡು ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಅಣ್ಣಾಮಲೈ ಅವರು ಅಗಸ್ಟ್ 25ರಂದು ಪಕ್ಷದ ರಾಷ್ಟ್ರೀಯ ಪ್ರಧಾನ ಪಿ ಮುರಳೀಧರ ರಾವ್ ಮತ್ತು ತಮಿಳುನಾಡು ರಾಜ್ಯ ಅಧ್ಯಕ್ಷರು ಎಲ್ ಮುರುಗನ್ ಸಮ್ಮುಖದಲ್ಲಿ ಅವರು ಮಂಗಳವಾರ ಪಕ್ಷಕ್ಕೆ ಸೇರ್ಪಡೆ ಗೊಂಡಿದ್ದರು.

ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಮುರುಗನ್ ಅವರು ಅಣ್ಣಾಮಲೈ ಅವರಿಗೆ ಉಪಾಧ್ಯಕ್ಷ ಸ್ಥಾನ ನಿರ್ವಹಣೆಗಾಗಿ ಶುಭ ಹಾರೈಸಿದ್ದಾರೆ.

ಕರೂರು ಮೂಲದ ಅಣ್ಣಾಮಲೈ ಕರ್ಣಾಟಕ ಕೇಡರ್ ನ ಮಾಜಿ ಐಪಿಎಸ್ ಅಧಿಕಾರಿ ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೋಲಿಸ್ ವರಿಷ್ಠಾಧಿಕಾರಿಯಾಗಿ ಬೆಂಗಳೂರಿನಲ್ಲಿ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿ ಹುದ್ದೆಗೆ ರಾಜೀನಾಮೆ ನೀಡಿದ್ದರು.


Spread the love
1 Comment
5 years ago

Very sad day for India indeed. A brilliant and honest officer gave up on hard-work and joined….