ದಕ್ಷಿಣಕನ್ನಡ ಜಿಲ್ಲಾ ಪತ್ರಕರ್ತರ ಸಮೇಳನ: ಧರ್ಮಸ್ಥಳದಲ್ಲಿ ಲಾಂಛನ ಬಿಡುಗಡೆ 

Spread the love

ದಕ್ಷಿಣಕನ್ನಡ ಜಿಲ್ಲಾ ಪತ್ರಕರ್ತರ ಸಮೇಳನ: ಧರ್ಮಸ್ಥಳದಲ್ಲಿ ಲಾಂಛನ ಬಿಡುಗಡೆ 

ಉಜಿರೆ: ದಕ್ಷಿಣಕನ್ನಡಜಿಲ್ಲೆಯ ಪತ್ರಕರ್ತರು ವಿಶೇಷವಾಗಿ, ವಿಭಿನ್ನವಾಗಿ ಹೊಣೆಗಾರಿಕೆಯಿಂದಕಾರ್ಯ ನಿರ್ವಹಿಸಿ ತಮ್ಮ ವೃತ್ತಿಯಘನತೆ, ಗೌರವಕಾಪಾಡಿಕೊಂಡಿದ್ದಾರೆಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ದ.ಕ. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಆಶ್ರಯದಲ್ಲಿ ಜುಲೈ ಒಂದರಂದು ಮಂಗಳೂರಿನಲ್ಲಿ ನಡೆಯಲಿರುವಜಿಲ್ಲಾ ಪತ್ರಕರ್ತರ ಸಮ್ಮೇಳನದ ಲಾಂಛನವನ್ನುಅವರು ಸೋಮವಾರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಪ್ರಜ್ಞಾವಂತರಾಗಿ, ವಿಚಾರವಂತರಾಗಿ, ಬುದ್ಧಿವಂತರಾಗಿತಮ್ಮ ಸೃಜನಶೀಲ ವರದಿಗಾರಿಕೆಯಿಂದಓದುಗರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.ತಾನು ಮೂರುತಲೆಮಾರಿನ ಪತ್ರಕರ್ತರಕಾರ್ಯ ಶೈಲಿಯನ್ನು ಗಮನಿಸಿದ್ದು ಹೊಸ ತಲೆ ಮಾರಿನ ಪತ್ರಕರ್ತರುಕೂಡಾ ಪ್ರಾಮಾಣಿಕವಾಗಿಹೊಣೆಗಾರಿಕೆಯಿಂದಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿ ಜಿಲ್ಲಾ ಸಮ್ಮೇಳನಕ್ಕೆ ಶುಭ ಹಾರೈಸಿದರು.

ದಕ್ಷಿಣಕನ್ನಡಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷೆ ಶ್ರೀನಿವಾಸ್ ನಾಯಕ್‍ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಸ್ವಾಗತ ಸಮಿತಿ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ, ನಗರ ಕಾರ್ಯದರ್ಶಿ ಜಿತೇಂದ್ರಕುಂದೇಶ್ವರ, ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಮೋಟುಕಾನ, ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದಅಧ್ಯಕ್ಷಆರ್.ಯನ್. ಪೂವಣಿ ಮತ್ತುಧನಕೀರ್ತಿಆರಿಗ, ಧರ್ಮಸ್ಥಳ ಉಪಸ್ಥಿತರಿದ್ದರು.


Spread the love