ದಕ ಜಿಲ್ಲೆಯಲ್ಲಿ 12 ಕೋವಿಡ್ ಪಾಸಿಟಿವ್ ಪ್ರಕರಣ ದೃಢ

Spread the love

ದಕ ಜಿಲ್ಲೆಯಲ್ಲಿ 12 ಕೋವಿಡ್ ಪಾಸಿಟಿವ್ ಪ್ರಕರಣ ದೃಢ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಒಟ್ಟು 12 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿದ್ದು ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 457 ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ 8 ಪುರುಷರು ಮತ್ತು ನಾಲ್ಕು ಮಹಿಳೆಯರು ಸೇರಿದ್ದು, 7 ಮಂದಿ ‘ಇಲಿ’ ಹಾಗೂ ಒರ್ವರು ‘ಸಾರಿ’ ಪ್ರಕರಣದಿಂದ ಸೋಂಕು ದೃಢಪಟ್ಟಿದ್ದು, ನಾಲ್ಕು ಮಂದಿ ಶಾರ್ಜಾದಿಂದ ವಾಪಾಸಾಗಿದ್ದಾರೆ

ಎಲ್ಲಾ 12 ರೋಗಿಗಳನ್ನು ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


Spread the love