ದೇರಳಕಟ್ಟೆಯಲ್ಲಿ ಪ್ರಾರ್ಥನೆಗೆ ತೆರಳಿ ವೃದ್ಧ ನಾಪತ್ತೆ
ಮಂಗಳೂರು: ಉಳ್ಳಾಲ ತಾಲೂಕಿನ ಬೆಳ್ಳ ಗ್ರಾಮದ ಬದ್ಯಾರು ಮನೆಯ ನಿವಾಸಿ ಎಂ. ಮಹಮ್ಮದ್ (80) ಎಂಬವರು ಶುಕ್ರವಾರದ ಪ್ರಾರ್ಥನೆಗೆ ತೆರಳಿ ಮನೆಗೆ ವಾಪಾಸಾಗದೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಸೆಪ್ಟೆಂಬರ್ 19ರಂದು ಮಧ್ಯಾಹ್ನ 12.30 ಗಂಟೆಗೆ ಮಹಮ್ಮದ್ ಅವರು ಬೆಳ್ಳ ಗ್ರಾಮದಲ್ಲಿರುವ ತಮ್ಮ ಮನೆಯಿಂದ ದೇರಳಕಟ್ಟೆಯ ಬದ್ರಿಯಾ ಜುಮ್ಮಾ ಮಸೀದಿಗೆ ಪ್ರಾರ್ಥನೆಗೆ ತೆರಳಿದ್ದರು. ಸಾಮಾನ್ಯವಾಗಿ ಪ್ರಾರ್ಥನೆ ಮುಗಿಸಿಕೊಂಡು ಮಧ್ಯಾಹ್ನ 1.30ಕ್ಕೆ ಮನೆಗೆ ವಾಪಾಸಾಗುವವರು, ಆ ದಿನ ಮನೆಗೆ ಮರಳಿರಲಿಲ್ಲ.
ಕುಟುಂಬಸ್ಥರು ಸಂಬಂಧಿಕರು ಹಾಗೂ ಸ್ನೇಹಿತರಲ್ಲಿ ವಿಚಾರಣೆ ನಡೆಸಿದರೂ ಪತ್ತೆಯಾಗದ ಕಾರಣ, ಅವರ ಪುತ್ರ ಮಹಮ್ಮದ್ ಇರ್ಷಾದ್ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
ಕಾಣೆಯಾದವರ ವಿವರ:
ಹೆಸರು: ಎಂ. ಮಹಮ್ಮದ್
ವಯಸ್ಸು: 80 ವರ್ಷ
ಎತ್ತರ: 5.5 ಅಡಿ
ಮೈಬಣ್ಣ: ಗೋಧಿ
ಧರಿಸಿರುವುದು: ಬಿಳಿ ಕುರ್ಥಾ ಮತ್ತು ಬಿಳಿ ಲುಂಗಿ
ಮಾತನಾಡುವ ಭಾಷೆಗಳು: ತುಳು, ಕನ್ನಡ, ಮಲಯಾಳಂ, ಬ್ಯಾರಿ, ಹಿಂದಿ
ಯಾರಾದರೂ ಇವರ ಪತ್ತೆಯ ಕುರಿತು ಮಾಹಿತಿ ಹೊಂದಿದ್ದರೆ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ ನಿಯಂತ್ರಣ ಕೊಠಡಿ (0824-2220800) ಅಥವಾ ಕೊಣಾಜೆ ಪೊಲೀಸ್ ಠಾಣೆ (0824-2220536 / 9480802350) ಅನ್ನು ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ.