ದ.ಕ.ಜಿಲ್ಲೆಯಲ್ಲಿ ಹೊಸ 18 ಪ್ರಕರಣಗಳೊಂದಿಗೆ ಒಂದೇ ದಿನ 24 ಮಂದಿಗೆ ಕೊರೋನಾ ಪಾಸಿಟಿವ್ ದೃಢ

Spread the love

ದ.ಕ.ಜಿಲ್ಲೆಯಲ್ಲಿ ಹೊಸ 18 ಪ್ರಕರಣಗಳೊಂದಿಗೆ ಒಂದೇ ದಿನ 24 ಮಂದಿಗೆ ಕೊರೋನಾ ಪಾಸಿಟಿವ್ ದೃಢ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಕೊರೋನ ಸೋಂಕಿನ 6 ಪ್ರಕರಣಗಳು ದೃಢಪಟ್ಟಿದ್ದರೆ, ಸಂಜೆ ಬಿಡುಗಡೆಯಾದ ಬುಲೆಟಿನ್ನಲ್ಲಿ ಮತ್ತೆ 18 ಮಂದಿಗೆ ಸೋಂಕು ದೃಢಗೊಂಡಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 105ಕ್ಕೇರಿದೆ.

ಆ ಪೈಕಿ ದ.ಕ.ಜಿಲ್ಲೆಯ 97 ಮತ್ತು ಉಳಿದ 8 ಪ್ರಕರಣವು ಹೊರ ರಾಜ್ಯ ಮತ್ತು ಹೊರ ಜಿಲ್ಲೆಗೆ ಸೇರಿದೆ. ಸಂಜೆ ದೃಢಗೊಂಡ ಪ್ರಕರಣಗಳೆಲ್ಲವೂ ಮುಂಬೈಯಿಂದ ಮಂಗಳೂರಿಗೆ ಬಂದವರಲ್ಲಿ ಕಂಡು ಬಂದಿದೆ.


Spread the love