ನಂದಿಗುಡ್ಡೆ ರುದ್ರಭೂಮಿ ಅಭಿವೃದ್ಧಿ ಕಾಮಗಾರಿ ಶೀಘ್ರದಲ್ಲಿ ಪೂರ್ಣ – ಶಾಸಕ ಲೋಬೊ
ಮಂಗಳೂರು : ನಂದಿಗುಡ್ಡೆ ರುದ್ರಭೂಮಿ ಬಹಳ ಹಳೆಯದಾಗಿದ್ದು, ಇದರಲ್ಲಿ ಹೆಣಗಳನ್ನು ಸುಡಲು ಕೇವಲ ನಾಲ್ಕು ಸಿಲಿಕಾನ್ ಟ್ರೇಗಳಿದ್ದವು. ಕೆಲವು ದಿನ ಹೆಣಗಳ ಸಂಖ್ಯೆ ಅಧಿಕವಾಗಿದ್ದಾಗ ಪ್ರಯಾಸಕರ ಸಂದರ್ಭ ಒದಗಿ ಬರುತ್ತಿತ್ತು. ಸುಮಾರು ರೂಪಾಯಿ 50 ಲಕ್ಷ ಅನುದಾನ ಈಗಾಗಲೇ 14ನೇ ಹಣಕಾಸಿನ ಯೋಜನೆಯಿಂದ ಮಂಜೂರಾಗಿದ್ದು, ಕಾಮಗಾರಿ ಈಗಾಗಲೇ ಪ್ರಾರಂಭಿಸಲಾಗಿದೆ. 4 ಹೊಸ ಸಿಲಿಕಾನ್ ಟ್ರೇಗಳನ್ನು ನಿರ್ಮಿಸಲಾಗುತ್ತಿದ್ದು, ಅದರ ಮೇಲೆ ಶೆಡ್ನ್ನು ಕಟ್ಟಲಾಗಿದೆ ಅದಲ್ಲದೇ 2 ಹಳೆಯ ಸಿಲಿಕಾನ್ ಟ್ರೇಗಳನ್ನು ದುರಸ್ತಿಗೊಳಿಸಲಾಗುತ್ತದೆ.

ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಜೆ. ಆರ್. ಲೋಬೋರವರು ಇಂದು ತಾ 13-01-2018ರಂದು ಕಾಮಗಾರಿಯನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸುತ್ತಾ ಅತೀ ಶೀಘ್ರದಲ್ಲಿಯೇ ಹೊಸ ಸಿಲಿಕಾನ್ ಟ್ರೇಗಳ ಕಾಮಗಾರಿಯು ಮುಗಿಯಲಿದೆ. ಅದಲ್ಲದೇ ಇದರ ಬಳಿ ಇಂಟರ್ಲಾಕ್ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ. ಹೈಮಾಸ್ಕ್ ಲೈಟ್ಗಳನ್ನು ಕೂಡ ಅಳವಡಿಸಲಾಗುವುದು. ಸಾರ್ವಜನಿಕ ನಿರೀಕ್ಷೆಯಂತೆ ಕಾಮಗಾರಿಯನ್ನು ನಡೆಸಲಾಗಿದೆ. ಈಗಾಗಲೇ ರೂ. 20 ಲಕ್ಷ ವೆಚ್ಚದಲ್ಲಿ ರುದ್ರಭೂಮಿ ಸುತ್ತಲೂ ಆವರಣ ಗೋಡೆಯನ್ನು ನಿರ್ಮಿಸಲಾಗಿದೆ. ಕಟ್ಟಿಗೆಯನ್ನು ಸಂಗ್ರಹಿಸಲು ಶೆಡ್ನ್ನು ನಿರ್ಮಿಸಲಾಗಿದೆ. ಅದಲ್ಲದೇ ಮುಂದಿನ ದಿನಗಳಲ್ಲಿ ನೀರಿನ ಭವಣೆಯನ್ನು ಕಡಿಮೆ ಮಾಡಲು ಬೋರ್ವೆಲ್ ವ್ಯವಸ್ಥೆಯನ್ನು ಮಾಡುವ ಇರಾದೆಯಿದೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆಯ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್, ಕಾಪೆರ್Çೀರೇಟರ್ಗಳಾದ ಶೈಲಜಾ, ಅಪ್ಪಿ, ಪ್ರೇಮಾನಂದ ಶೆಟ್ಟಿ, ರತಿಕಲಾ, ಕವಿತಾ ವಾಸು, ಪ್ರವೀಣ್ ಚಂದ್ರ ಆಳ್ವ, ಕೆ.ಎಸ್.ಆರ್.ಟಿ.ಸಿ. ನಿರ್ದೇಶಕ ಟಿ.ಕೆ. ಸುಧೀರ್, ಮೆಸ್ಕಾಂ ನಿರ್ದೇಶಕ ಸದಾಶಿವ ಅಮೀನ್, ಜಯಂತ ಪೂಜಾರಿ, ಸಂದೀಪ್, ರಮಾನಂದ ಪೂಜಾರಿ, ರಂಜನ್ ಕುಮಾರ್, ಮೊಹಮದ್ ನವಾಜ್, ವಿದ್ಯಾ, ಕೃತಿನ ಕುಮಾರ್, ಶಶಿಧರ ಕೊಟ್ಟಾರಿ, ಶೇಖರ ಜಪ್ಪಿನಮೊಗರು, ಪಾಲಿಕೆಯ ಉಪಆಯುಕ್ತ ಶ್ರೀ ಲಿಂಗೇಗೌಡ, ಅಭಿಯಂತರರಾದ ಗಣಪತಿ ಮೊದಲಾದವರು ಉಪಸ್ಥಿತರಿದ್ದರು.













