ನಂದಿನಿ ಹಾಲು ಮತ್ತು ಮೊಸರಿನ ದರ ಪರಿಷ್ಕರಣೆ

Spread the love

ನಂದಿನಿ ಹಾಲು ಮತ್ತು ಮೊಸರಿನ ದರ ಪರಿಷ್ಕರಣೆ 

ಮಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲವಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಹಾಲಿನ ಉತ್ಪಾದನೆಗೆ ನೀರು / ಮೇವಿನ ಕೊರತೆ ಹಿನ್ನೆಲೆಯಲ್ಲಿ ರಾಸುಗಳ ಸಾಕಾಣಿಕೆಗೆ ಬಳಸುವ ಪಶು ಆಹಾರದÀ ಬೆಲೆ, ಸಾಗಾಣಿಕೆ ಮತ್ತು ಸಂಸ್ಕರಣೆ/ಪ್ಯಾಕಿಂಗ್ ವೆಚ್ಚ ದುಬಾರಿಯಾಗಿರುವ ಕಾರಣ, ನಂದಿನಿ ಹಾಲಿನ ಮಾರುಕಟ್ಟೆ ದರವನ್ನು ಹೆಚ್ಚಿಸಿ ರೈತರಿಗೆ ಉತ್ತಮದರ ನೀಡುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಹಾಗೂ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳದ ಆದೇಶದಂತೆ ರಾಜ್ಯಾದಾದ್ಯಂತ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ಬೆಲೆಯನ್ನು ಪರಿಷ್ಕರಿಸಲಾಗಿದೆ. ಅದರಂತೆ ದಿನಾಂಕ 01.04.2017ರ ಬೆಳಗ್ಗಿನ ಸರದಿಯಿಂದ ಅನ್ವಯವಾಗುವಂತೆ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಈ ಕೆಳಕಂಡಂತೆ ಪರಿಷ್ಕರಿಸಲಾಗಿದೆ.

ದಕ್ಷಿಣಕನ್ನಡ ಮತ್ತುಉಡುಪಿ ಜಿಲ್ಲೆಗಳಲ್ಲಿ ನಂದಿನಿ ಹಾಲು ಮತ್ತು ಮೊಸರನ್ನು ನಂದಿನಿ ಡೀಲರುಗಳು ಗರಿಷ್ಟ ಮಾರಾಟದರಕ್ಕೆ (ಒಖP) ಮೀರದಂತೆ ಮಾರಾಟ ಮಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ತಿಳಿಸಲಾಗಿದೆ.

1 ನಂದಿನಿ ಟೋನ್ಡ್ ಹಾಲು (500 ಮಿ.ಲೀ.) 17.00 (ಹಳೆಯ ದರ),           18.00 (ಪರಿಪ್ಕೃತ ದರ )
2 ನಂದಿನಿ ಟೋನ್ಡ್ ಹಾಲು (1000 ಮಿ.ಲೀ.) 34.00(ಹಳೆಯ ದರ), 35.00(ಪರಿಪ್ಕೃತ ದರ )
3 ನಂದಿನಿ ಹೋಮೊಜಿನೈಸ್ಡ್ ಹಸುವಿನ ಹಾಲು (500 ಮಿ.ಲೀ.) 19.00(ಹಳೆಯ ದರ), 20.00(ಪರಿಪ್ಕೃತ ದರ )
4 ನಂದಿನಿ ಹೋಮೊಜಿನೈಸ್ಡ್ ಹಸುವಿನ ಹಾಲು(6 ಲೀ. ಜಂಬೋ) 222.00(ಹಳೆಯ ದರ), 234.00(ಪರಿಪ್ಕೃತ ದರ )
5 ನಂದಿನಿ ಶುಭಂ ಹಾಲು (500 ಮಿ.ಲೀ.) 20.00(ಹಳೆಯ ದರ), 21.00(ಪರಿಪ್ಕೃತ ದರ )
6 ನಂದಿನಿ ಸಮೃದ್ಧಿ ಹಾಲು (500 ಮಿ.ಲೀ.) 21.00(ಹಳೆಯ ದರ), 22.00(ಪರಿಪ್ಕೃತ ದರ )
7 ಮೊಸರು (200 ಗ್ರಾಂ) 10.00(ಹಳೆಯ ದರ),11.00(ಪರಿಪ್ಕೃತ ದರ )
8 ಮೊಸರು(415 ಗ್ರಾಂ) 19.00(ಹಳೆಯ ದರ), 20.00(ಪರಿಪ್ಕೃತ ದರ )
9 ಮೊಸರು (1 ಕೆಜಿ) 41.00(ಹಳೆಯ ದರ), 43.00(ಪರಿಪ್ಕೃತ ದರ )
10 ಮೊಸರು(6 ಕೆಜಿಜಂಬೋ) 240.00(ಹಳೆಯ ದರ), 252.00(ಪರಿಪ್ಕೃತ ದರ )

ಒಕ್ಕೂಟದಲ್ಲಿ ಈಗಾಗಲೇ ದಾಸ್ತಾನಿರುವ ಹಳೆಯ ದರ ನಮೂದಿಸಿರುವ ಪ್ಯಾಕಿಂಗ್ ಫಿಲಂ ದಾಸ್ತಾನು ಮುಗಿಯುವವರೆಗೆ ಅದೇ ಫಿಲಂನಲ್ಲಿ ನಂದಿನಿ ಹಾಲು ಮತ್ತು ಮೊಸರನ್ನು ಪ್ಯಾಕ್ ಮಾಡಿ ಸರಬರಾಜು ಮಾಡಲಾಗುವುದು. ಎಲ್ಲಾ ಗ್ರಾಹಕರು ಹಾಗೂ ನಂದಿನಿ ಹಾಲಿನ ಅಧಿಕೃತ ಡೀಲರುಗಳು ಪರಿಷ್ಕøತ ದರದಲ್ಲಿಯೇ ವ್ಯವಹರಿಸಿ ಒಕ್ಕೂಟದೊಂದಿಗೆ ಸಹಕರಿಸಲು ವಿನಂತಿಸಲಾಗಿದೆ.


Spread the love