ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮತ ಎಣಿಕೆ : ನಿಷೇದಾಜ್ಞೆ

Spread the love

ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮತ ಎಣಿಕೆ : ನಿಷೇದಾಜ್ಞೆ

ಉಡುಪಿ : ನಗರ ಸ್ಥಳೀಯ ಸಂಸ್ಥೆ ಚುನಾವಣೆ-2018 ರ ಸಂಬಂದ ಉಡುಪಿ ನಗರಸಭೆ, ಪುರಸಭೆ ಕುಂದಾಪುರ, ಕಾರ್ಕಳ, ಪಟ್ಟಣ ಪಂಚಾಯತ್ ಸಾಲಿಗ್ರಾಮ ವ್ಯಾಪ್ತಿಯಲ್ಲಿ ನಡೆದ ಮತದಾನದ ಮತ ಎಣಿಕೆಯು ಸೆಪ್ಟಂಬರ್ 3 ರಂದು , ಉಡುಪಿ ಕುಂಜಿಬೆಟ್ಟುನಲ್ಲಿನ ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆ , ತಾಲೂಕು ಕಚೇರಿ ಕೋರ್ಟ್ ಹಾಲ್, ಮಿನಿ ವಿಧಾನ ಸೌಧ ಕುಂದಾಪುರ, ತಾಲೂಕು ಕಚೇರಿ ಹಾಲ್ , ಮಿನಿ ವಿಧಾನಸೌಧ ಕಾರ್ಕಳ ಇಲ್ಲಿ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ , ಉಡುಪಿ ನಗರಸಭೆ, ಪುರಸಭೆ ಕುಂದಾಪುರ, ಕಾರ್ಕಳ, ಪಟ್ಟಣ ಪಂಚಾಯತ್ ಸಾಲಿಗ್ರಾಮ ವ್ಯಾಪ್ತಿಯಲ್ಲಿ , ಸೆಪ್ಟಂಬರ್ 3 ರ ಬೆಳಗ್ಗೆ 6 ಗಂಟೆಯಿಂದ ಸೆಪ್ಟಂಬರ್ 4 ರ ಬೆಳಗ್ಗೆ 6 ಗಂಟೆಯವರೆಗೆ ಸೆಕ್ಷನ್ 144 ರಂತೆ ನಿಷೇದಾಜ್ಞೆ ಜಾರಿಗೊಳಿಸಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶಿಸಿದ್ದಾರೆ.


Spread the love