ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ : 34 ಹೆಸರಿನ ಪಟ್ಟಿಗೆ ಸಿಎಂ ಸಿದ್ದರಾಮಯ್ಯ ಅಂಕಿತ

Spread the love

ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ : 34 ಹೆಸರಿನ ಪಟ್ಟಿಗೆ ಸಿಎಂ ಸಿದ್ದರಾಮಯ್ಯ ಅಂಕಿತ

ಬೆಂಗಳೂರು: ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ಪಟ್ಟಿ ಅಂತಿಮಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ 34 ಮಂದಿಯ ಹೆಸರಿನ ಪಟ್ಟಿಗೆ ಅಧಿಕೃತ ಅಂಕಿತ ಹಾಕಿದ್ದಾರೆ. ಎಐಸಿಸಿ ಪ್ರಕಟಿಸಿದ್ದ 39 ಮಂದಿಯ ಪ್ರಾಥಮಿಕ ಪಟ್ಟಿಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿ ಈ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ.

ಈ ಕುರಿತ ಅಧಿಕೃತ ಆದೇಶವನ್ನು ಸರಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಲಾಗಿದೆ. ಎಐಸಿಸಿ ಪ್ರಕಟಿಸಿದ್ದ ಪಟ್ಟಿಯಲ್ಲಿ ಇಲ್ಲದ ಎಚ್.ಡಿ. ಗಣೇಶ್ ಅವರನ್ನು ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷರಾಗಿ ಹಾಗೂ ನಿಕೇತ್ ರಾಜ್ ಎಂ. ಅವರನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ನೂತನ ಅಧ್ಯಕ್ಷರ ಪಟ್ಟಿ:

ಕರಾವಳಿ ಅಭಿವೃದ್ಧಿ ಪ್ರಾಧಿಕಾರ – ಎಂ.ಎ. ಗಫೂರ್

ಮೆಸ್ಕಾಂ – ಕೆ. ಹರೀಶ್ ಕುಮಾರ್

ಕೇಂದ್ರ ಪರಿಹಾರ ಸಮಿತಿ – ಆಗಾ ಸುಲ್ತಾನ್

ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆ – ಲಾವಣ್ಯಾ ಬಲ್ಲಾಳ್ ಜೈನ್

ರಾಜ್ಯ ಸಫಾಯಿ ಕರ್ಮಚಾರಿ ಆಯೋಗ – ಪಿ. ರಘು

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ – ಶಿವಲೀಲಾ ವಿನಯ್ ಕುಲಕರ್ಣಿ

ಜೈವಿಕ ವೈವಿಧ್ಯ ಮಂಡಳಿ – ವಡ್ನಾಳ್ ಜಗದೀಶ್

ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ – ಮುರಳಿ ಅಶೋಕ್ ಸಾಲಪ್ಪ

ಎಸ್.ಸಿ/ಎಸ್.ಟಿ ಆಯೋಗ – ಡಾ. ಮೂರ್ತಿ

ಮಾಜಿ ಸೈನಿಕರ ಕಲ್ಯಾಣ ಮಂಡಳಿ – ಕರ್ನಲ್ ಮಲ್ಲಿಕಾರ್ಜುನ್

ಮಾವು ಅಭಿವೃದ್ಧಿ ನಿಗಮ – ಡಾ. ಬಿ.ಸಿ. ಮುದ್ದುಗಂಗಾಧರ್

ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ – ಶಾಲೆಟ್ ಪಿಂಟೋ

ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ – ಮಾರಿಯೋಜಿ ರಾವ್

ರಾಜ್ಯ ಗೋದಾಮು ನಿಗಮ – ಎನ್. ಸಂಪಂಗಿ

ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿ. – ವೈ. ಸಯೀದ್ ಅಹ್ಮದ್

ಕಾಡುಗೊಲ್ಲ ಅಭಿವೃದ್ಧಿ ನಿಗಮ – ಮಹೇಶ್ ಎಂ.

ಬಯಲುಸೀಮೆ ಅಭಿವೃದ್ಧಿ ಮಂಡಳಿ (ಚಿತ್ರದುರ್ಗ) – ಎಚ್.ಬಿ. ಮಂಜಪ್ಪ

ಉಪ್ಪಾರ ಅಭಿವೃದ್ಧಿ ನಿಗಮ – ಭರಮಣ್ಣ ಉಪ್ಪಾರ

ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ – ಎಸ್.ಜಿ. ನಂಜಯ್ಯನಮಠ

ಬೀಜ ಅಭಿವೃದ್ಧಿ ನಿಗಮ – ಆಂಜನಪ್ಪ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ – ಅರುಣ್ ಕುಮಾರ್ ಪಾಟೀಲ್

ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ (ಕಲಬುರಗಿ) – ಬಾಬು ಹೊನ್ನ ನಾಯ್ಕ್

ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ (ಬೆಳಗಾವಿ) – ಯುವರಾಜ್ ಕದಂ

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ – ಪ್ರವೀಣ್ ಕುಮಾರ್ ಪಾಟೀಲ್

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ – ಮಂಜುನಾಥ ಪೂಜಾರಿ

ಸವಿತಾ ಸಮಾಜ ಅಭಿವೃದ್ಧಿ ನಿಗಮ – ಎಂ.ಎಸ್. ಮುತ್ತುರಾಜ್

ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ – ನಂಜಪ್ಪ

ಗಾಣಿಗ ಅಭಿವೃದ್ಧಿ ನಿಗಮ – ವಿಶ್ವಾಸ್ ಕುಮಾರ್ ದಾಸ್

ರೇಷ್ಮೆ ಮಾರುಕಟ್ಟೆ ಮಂಡಳಿ – ಎಸ್. ಗಂಗಾಧರ್

ಹಾಸನ ನಗರಾಭಿವೃದ್ಧಿ ಪ್ರಾಧಿಕಾರ – ಪಟೇಲ್ ಶಿವಣ್ಣ

ಕುಂಬಾರ ಅಭಿವೃದ್ಧಿ ನಿಗಮ – ಡಾ. ಶ್ರೀನಿವಾಸ ವೇಲು

ಕನಿಷ್ಠ ವೇತನ ಸಲಹಾ ಮಂಡಳಿ – ಟಿ.ಎಂ. ಶಾಹಿದ್ ತೆಕ್ಕಿಲ್

ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ – ಚೇತನ್ ಕೆ. ಗೌಡ

ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿ. – ಎಚ್.ಡಿ. ಗಣೇಶ್

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ – ನಿಕೇತ್ ರಾಜ್ ಎಂ.


Spread the love
Subscribe
Notify of

0 Comments
Inline Feedbacks
View all comments