ನಿರಂತರ್ ಉದ್ಯಾವರ : ಸಿನಿಮಾ ಉತ್ಸವದ ಪೋಸ್ಟರ್ ಬಿಡುಗಡೆ

Spread the love

ನಿರಂತರ್ ಉದ್ಯಾವರ : ಸಿನಿಮಾ ಉತ್ಸವದ ಪೋಸ್ಟರ್ ಬಿಡುಗಡೆ

ಉಡುಪಿ: ನಿರಂತರ್ ಉದ್ಯಾವರ ಸಂಘಟನೆಯ ಎಂಟನೇ ವರ್ಷದ ಸಂಸ್ಥಾಪನ ಸಂಭ್ರಮದ ಪ್ರಯುಕ್ತ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೊ. ಆಪರೇಟಿವ್ ಸೊಸೈಟಿ ಲಿಮಿಟೆಡ್ ಉಡುಪಿ ಇದರ ಸಹಾಯದೊಂದಿಗೆ ಪ್ರದರ್ಶನವಾಗಲಿರುವ ಸಾಮಾಜಿಕ ಕಳಕಳಿಯ ಆಯ್ಧ ಮೂರು ಪ್ರಶಸ್ತಿ ವಿಜೇತ ಕನ್ನಡ ಸಿನಿಮಾಗಳ ನಿರಂತರ್ ಸಿನಿಮ ಉತ್ಸವ 2025 ಇದರ ಪೋಸ್ಟರ್ ಬಿಡುಗಡೆಯು ಅನುಗ್ರಹ ಪಾಲನ ಕೇಂದ್ರದಲ್ಲಿ ನಡೆಯಿತು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಪೋಸ್ಟರ್ ಬಿಡುಗಡೆ ನೆರವೇರಿಸಿ, ನಿರಂತರ್ ಸಂಘಟನೆಯೂ ಕಳೆದ ಹಲವಾರು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಕಲೆ, ಸಾಹಿತ್ಯದ ಕಾರ್ಯಕ್ರಮ ನಡೆಸುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.

ಉಡುಪಿ ಶೋಕ ಮಾತ ದೇವಾಲಯದ ವಠಾರದಲ್ಲಿರುವ ಅವೇ ಮರಿಯ ಸಭಾಂಗಣದಲ್ಲಿ ಅಗಸ್ಟ್ 8ರಿಂದ 10ನೇ ತಾರೀಖಿನ ವರೆಗೆ ಮೂರು ದಿನದ ನಿರಂತರ್ ಸಿನಿಮ ಉತ್ಸವು ನಡೆಯಲಿದ್ದು, ಪ್ರತಿ ದಿನ ಸಂಜೆ ಆರು ಮೂವತ್ತಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಉಚಿತ ಪ್ರವೇಶವಿರುವ ಸಾಮಾಜಿಕ ಕಳಕಳಿಯ ಅಯ್ದ ಮೂರು ಪ್ರಶಸ್ತಿ ವಿಜೇತ ಕನ್ನಡ ಸಿನಿಮಾಗಳಾದ ಆಕ್ಟ್ 1978, 19.20.21 ಮತ್ತು ಫೋಟೋ ಚಲನಚಿತ್ರಗಳು ಪ್ರದರ್ಶನವಾಗಲಿದೆ.

ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಸಂಪರ್ಕ ಸಾಧನಗಳ ಆಯೋಗ ಮತ್ತು ಬೆಳ್ಳೆ ವಿಶನ್ ಡೊಟ್ ಕೊಮ್ ಇವರ ಸಹಯೋಗದೊಂದಿಗೆ ಡಾ| ಎವ್ಜಿನ್ ಡಿ’ಸೋಜಾ ಮೂಡುಬೆಳ್ಳೆ ಇವರ ‘ಮೋಗ್ ಆನಿಂ ಬಲಿದಾನ್’ (ಪ್ರೀತಿ ಮತ್ತು ಬಲಿದಾನ) ಪುಸ್ತಕದ ಲೋಕಾರ್ಪಣೆಯೂ ನಡೆಯಿತು.

ಈ ಸಂದರ್ಭದಲ್ಲಿ ವಿಶನ್ ಕೊಂಕಣಿ ಸ್ಥಾಪಕರು ಮತ್ತು ಪ್ರವರ್ತಕರಾದ ಮೈಕಲ್ ಡಿಸೋಜಾ, ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಸಂಪರ್ಕ ಸಾಧನಗಳ ಆಯೋಗ ಸಂಚಾಲಕರಾದ ವಂ|ಡೆನಿಸ್ ಡೆಸಾ, ಬರಹಗಾರ ಡಾ| ಎವ್ಜಿನ್ ಡಿ’ಸೋಜಾ ಮೂಡುಬೆಳ್ಳೆ, ಬೆಳ್ಳೆ ವಿಶನ್ ಡೊಟ್ ಕೊಮ್ ಪ್ರವರ್ತಕರಾದ ಎಲಿಯಾಸ್ ಡಿಸೋಜಾ, ಕಿಟಾಳ್ ಅಂತರ್ಜಾಲ ಮಾಧ್ಯಮದ ಸಂಪಾದಕ ಹೆಚ್ ಎಮ್ ಪೆರ್ನಾಲ್, ನಿರಂತರ್ ಸಂಘಟನೆಯ ಅಧ್ಯಕ್ಷ ರೋಷನ್ ಕ್ರಾಸ್ಟೊ, ಕಾರ್ಯದರ್ಶಿ ಒಲಿವಿರ ಮತಯಸ್, ಸ್ಥಾಪಕ ಅಧ್ಯಕ್ಷ ಸ್ಟೀವನ್ ಕುಲಾಸೊ, ಉಡುಪಿ ಸಿಂಡಿಕೇಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಸ್ಥಾಪಕ ಜೀವನ್ ಡಿಸೋಜಾ ಸಹಿತ ಮತ್ತಿತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments