ಪಕ್ಷದ ನಾಯಕರನ್ನು ಟೀಕಿಸುವವರ ವಿರುದ್ದ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಿ – ಅರ್ಜುನ್ ನಾಯರಿ
ಉಡುಪಿ: ಪಕ್ಷದ ಕೆಲವು ನಾಯಕರನ್ನು ಟೀಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ತೇಜೋವಧೆ ಮಾಡುವವರ ವಿರುದ್ದ ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿ ಕೂಡಲೇ ಕ್ರಮ ಜರುಗಿಸುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಅರ್ಜುನ್ ನಾಯರಿ ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಮತ್ತು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೀವ್ರ ಸ್ಪರ್ಧೆಯಾದರೂ ಕೂಡ ಜನತೆಯ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿರುವುದರಿಂದ, ಇಂದು ಕೂಡ ಜನರ ಹೃದಯದಲ್ಲಿ ಶಾಸಕರು ಹಾಗೂ ಸಂಸದರಾಗಿದ್ದಾರೆ.
ಕೇವಲ ಚುನಾವಣೆಯಲ್ಲಿ ಗೆಲವಲ್ಲ, ಜನಸೇವೆ ಎನ್ನುವ ನಿಸ್ವಾರ್ಥ ಧ್ಯೇಯದೊಂದಿಗೆ ನಮ್ಮ ಅಭ್ಯರ್ಥಿಗಳು ನಿರಂತರವಾಗಿ ಕ್ಷೇತ್ರದಲ್ಲಿ ಜನರ ಒಳಿತಿಗಾಗಿ ಕೆಲಸ ಮಾಡುತ್ತಿದ್ದು, ಇದರ ಫಲವಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಯುವ ಕಾಂಗ್ರೆಸ್ ವತಿಯಿಂದ ನಡೆದ ಚುನಾವಣೆಗಳಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೂ ನಮ್ಮ ಯುವ ನಾಯಕರು ಉತ್ತಮ ಮಾರ್ಗದರ್ಶನ ನೀಡಿದ್ದು, ಇದರಿಂದ ಪಕ್ಷದ ಶಕ್ತಿ ಮತ್ತು ಸಂಘಟನಾ ಬಲ ಹೆಚ್ಚಾಗಿದೆ.
ಆದರೆ, ಪಕ್ಷದ ಕೆಲವು ನಾಯಕರನ್ನು ಟೀಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ತೇಜೋವಧೆ ಮಾಡುವ ಮತ್ತು ಬಿಜೆಪಿ ಏಜೆಂಟರಾಗಿ ಕೆಲಸವನ್ನು ಮಾಡುತ್ತಿರುವ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಯವರ ಹೇಳಿಕೆ ಖಂಡನೀಯ. ಇಂತಹವರ ವಿರುದ್ಧ ಶಿಸ್ತು ಸಮಿತಿಯಿಂದ ತಕ್ಷಣ ಕ್ರಮ ಜರುಗಿಸಬೇಕು ಎಂಬುದು ನಮ್ಮ ಬೇಡಿಕೆ.
ಈ ಬಗ್ಗೆ ಸ್ಪಷ್ಟವಾದ ಹೇಳಿಕೆಯನ್ನು ನೀಡಿದ್ದಾರೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಅರ್ಜುನ್ ನಾಯರಿ, ಅವರು ಮಾಧ್ಯಮಗಳ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.