ಪತಿಯಿಂದ ಪತ್ನಿ ಹಾಗೂ ಇನ್ನೋರ್ವ ರ ಮೇಲೆ ಅಸಿಡ್ ಎಸೆತ – ಆಸ್ಪತ್ರೆಗೆ ದಾಖಲು

Spread the love

ಪತಿಯಿಂದ ಪತ್ನಿ ಹಾಗೂ ಇನ್ನೋರ್ವ ರ ಮೇಲೆ ಅಸಿಡ್ ಎಸೆತ – ಆಸ್ಪತ್ರೆಗೆ ದಾಖಲು

ಮಂಗಳೂರು: ಕೌಟಂಬಿಕ ಮನಸ್ತಾಪದಿಂದ ವ್ಯಕ್ತಿಯೋರ್ವ ಪತ್ನಿ ಹಾಗೂ ಆಕೆಯ ಸಂಬಂಧಿಯೋರ್ವರಿಗೆ ಆಸಿಡ್ ಎರಚಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನೆಲ್ಯಾಡಿಯಲ್ಲಿ ಸಂಭವಿಸಿದೆ.

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಯಾಡಿ ಕೊಣಾಲು ಗ್ರಾಮದ ನಿವಾಸಿ ಶ್ರೀಮತಿ ಶೈನಿ (ಪ್ರಾಯ ಸುಮಾರು 32 ವರ್ಷ) ಹಾಗೂ ಅವರ ಗಂಡ ಬಿಜು ಥೋಮಸ್ ಎಂಬವರ ಜೊತೆ ಮನಸ್ತಾಪವಿದ್ದು, ಸೆಪ್ಟೆಂಬರ್ 24 ರಂದು ಶೈನಿ ರವರು ಅವರ ಸಂಬಂಧಿ ಝಾನ್ಸಿ ಎಂಬವರ ಜೊತೆ ನೆಲ್ಯಾಡಿ ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡಲು ಹೋಗುತ್ತಿದ್ದಾಗ ಆರೋಪಿ ಬಿಜು ಥೋಮಸ್ ಎಂಬಾತನು ಇಬ್ಬರಿಗೂ ಆಸಿಡ್ ಎರಚಿದ್ದು, ಗಾಯಗೊಂಡ ಶೈನಿ ಮತ್ತು ಝಾನ್ಸಿರವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ.

ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರು ನೊಂದ ಮಹಿಳೆಯರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು.


Spread the love