ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಅಪ್ಪನಿಗೆ ನಕ್ಸಲರ ಸಂಪರ್ಕ ಇದೆ – ಶೋಭಾ ಕರಂದ್ಲಾಜೆ

Spread the love

ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಅಪ್ಪನಿಗೆ ನಕ್ಸಲರ ಸಂಪರ್ಕ ಇದೆ – ಶೋಭಾ ಕರಂದ್ಲಾಜೆ

ಉಡುಪಿ: ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ ತಂದೆ ಕೊಪ್ಪದವರು , ಹಿಂದೆ ನಕ್ಸಲರ ಜೊತೆ ಅವರಿಗೆ ಸಂಪರ್ಕ ಇತ್ತು.ಈ ಬಗ್ಗೆ ಪೊಲೀಸರಿಗೂ ಮಾಹಿತಿ ಇದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಅವರು ಶುಕ್ರವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅಮೂಲ್ಯ ತಂದೆಗೆ ಸಿರಿಮನೆ ನಾಗರಾಜು ಮತ್ತು ನಕ್ಸಲ್ ಬೆಂಬಲಿಗರ ಒಡನಾಟ ಅವರಿಗೆ ಇದೆ ಹೀಗಾಗಿ ಅಮೂಲ್ಯ ಅಪ್ಪನಿಗೆ ನಕ್ಸಲರ ಸಂಪರ್ಕ ಇದೆ.

ಭಾರತ ವಿರೋಧಿ ಘೋಷಣೆ ಕೂಗುವ ಜಾಲ ನಿರ್ಮಾಣ ಆಗಿದೆ.ದೇಶದಲ್ಲಿ ಜಿನ್ನಾ ಮಾನಸಿಕತೆ ಸೃಷ್ಟಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.ಪಾಕಿಸ್ಥಾನ್ ಜಿಂದಾಬಾದ್ ಕೂಗಿದ ಅಮೂಲ್ಯ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದೆ,

ಹಣ ಕೊಟ್ಟು ಒತ್ತಡ ಹಾಕಿ ಪ್ರಚಾರಕ್ಕಾಗಿ ಹೇಳಿಕೆ ಕೊಡಲಾಗುತ್ತಿದೆ.ಪಾಕ್ ಪರ ಘೋಷಣೆ ಕೂಗುವವರಿಗೆ ಉಗ್ರ ಶಿಕ್ಷೆ ಆಗಬೇಕು.ಈ ಸಂಬಂಧ ದೇಶದ ಮತ್ತು ರಾಜ್ಯದ ಕಾನೂನಲ್ಲಿ ಬದಲಾವಣೆ ಆಗಬೇಕು ಎಂದು ಹೇಳಿದರು.ಭಾರತದ ಅನ್ನ ತಿಂದು, ಸಬ್ಸಿಡಿ ಪಡೆದು ಪಾಕ್ ಪರ ಘೋಷಣೆ ಕೂಗ್ತಾರೆ ಎಂದ ಶೋಭಾ,ಇದರ ಹಿಂದೆ ಇರುವ ವ್ಯಕ್ತಿಗಳ ತನಿಖೆ ಆಗಬೇಕು, ಆಯೋಜಕರ ತನಿಖೆಯು ಆಗಬೇಕು. ಘೋಷಣೆ ಕೂಗಿದ ಅಮೂಲ್ಯ ತಂದೆ ಬಗ್ಗೆಯೂ ತನಿಖೆಯಾಗಬೇಕು ಎಂದರು.

ನಿನ್ನೆ ಘೋಷಣೆ ಕೂಗಿದ ಹುಡುಗಿ ಯಾರು? ಅವಳ ಹಿನ್ನೆಲೆಯೇನು, ಈಕೆಗೆ ಯಾವ ಸಂಘಟನೆಯ ಜೊತೆ ಸಂಬಂಧ ಇದೆ? ಈ ಬಗ್ಗೆ ತನಿಖೆಯಾಗಬೇಕು. ಎಲ್ಲರನ್ನೂ ದೇಶದ್ರೋಹದ ಕೇಸಿನ ಮೇಲೆ ಜೈಲಿಗೆ ಹಾಕಬೇಕು ಎಂದು ಗುಡುಗಿದ್ದಾರೆ. ಯಾವುದೇ ವಕೀಲರು ಕೇಸು ನಡೆಸಬಾರದು ಎಂದರು

ಹುಬ್ಬಳ್ಳಿ ಪ್ರಕರಣದಲ್ಲಿ ಬೆಂಗಳೂರಿನ ವಕೀಲರು ವಾದ ಮಾಡಲು ಹೋಗಿದ್ದಾರೆ. ರಾಷ್ಟ್ರಪ್ರೇಮದ ವಿಚಾರದಲ್ಲಿ ಯಾರು ರಾಜಿ ಆಗಬೇಡಿ.ಚುನಾವಣೆ ಬಂದಾಗ ರಾಜಕೀಯ ಮಾಡೋಣ .ಆದರೆ ಭಾರತಮಾತೆಯ ಬಗ್ಗೆ ಅವಹೇಳನ ಮಾಡಿದವರಿಗೆ ಉಗ್ರ ಶಿಕ್ಷೆಯಾಗಬೇಕು ಎಂದರು.

ಅಮೂಲ್ಯಗೆ ಮಾತನಾಡಲು ಅವಕಾಶ ನೀಡಬೇಕಿತ್ತು ಎಂದು ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದೆ ,ಡಿಕೆ ಶಿ ಒರ್ಜಿನಲ್ ಕಾಂಗ್ರೆಸ್ಸಿಗ ಅಲ್ಲ .ನಿಜವಾದ ಕಾಂಗ್ರೆಸ್ಸಿಗರು ಈ ಹೇಳಿಕೆ ನೀಡುತ್ತಿರಲಿಲ್ಲ.ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಪಕ್ಷ ಕಾಂಗ್ರೆಸ್ ಅಂತಾರೆ.ಹೇಳಿಕೆ ನೀಡಿದ ಡಿಕೆಶಿ ಬಗ್ಗೆಯೂ ತನಿಖೆಯಾಗಬೇಕು ಎಂದರು.

ಅಮೂಲ್ಯಗೆ ಮಾತನಾಡಲು ಅವಕಾಶ ನೀಡಬೇಕಿತ್ತು ಡಿಕೆಶಿ ಹೇಳಿಕೆ ಬಗ್ಗೆ ತನಿಖೆಯಾಗಲಿ – ಸಂಸದೆ ಶೋಭಾ ಕರಂದ್ಲಾಜೆ


Spread the love