ಪಿಲಿಕುಳದಲ್ಲಿ ಜನಾಕರ್ಷಿಸುತ್ತಿರುವ ಕರಕುಶಲ ದಸರಾ ಮೇಳ 

Spread the love

ಪಿಲಿಕುಳದಲ್ಲಿ ಜನಾಕರ್ಷಿಸುತ್ತಿರುವ ಕರಕುಶಲ ದಸರಾ ಮೇಳ 

ಮಂಗಳೂರು : ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಅರ್ಬನ್ ಹಾಥ್‍ನಲ್ಲಿ ದಸರಾ ಉತ್ಸವದ ಅಂಗವಾಗಿ ಏರ್ಪಡಿಸಲಾದ ಕರಕುಶಲ ದಸರಾ ಮೇಳಕ್ಕೆ ಶುಕ್ರವಾರ ಚಾಲನೆ ದೊರಕಿದೆ.

ಈ ದಿನದಿಂದ ಅಕ್ಟೋಬರ್ 13 ವರೆಗೆ 10 ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ತಮಿಳುನಾಡು, ಉತ್ತರಪ್ರದೇಶ, ಆಂದ್ರ ಪ್ರದೇಶ, ಕೇರಳ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಕುಶಲಕರ್ಮಿಗಳು ತಮ್ಮ ಉತ್ಪನ್ನಗಳೊಂದಿಗೆ ಆಗಮಿಸಿದ್ದಾರೆ. ನವನವೀನ ವಿನ್ಯಾಸದ ಆಕರ್ಷಕ ಕರಕುಶಲ ವಸ್ತುಗಳು ಇಲ್ಲಿ ಪ್ರದರ್ಶನ ಮತ್ತು ಮಾರಟಕ್ಕಿಡಲಾಗಿದೆ. ಎಲ್ಲಾ ವಿಧದ ದರದಲ್ಲಿ ಕರಕುಶಲ ವಸ್ತುಗಳು ಮಾರಾಟಕ್ಕೆ ಲಭ್ಯವಿದೆ.

ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಿಲಿಕುಳಕ್ಕೆ ಬೇಟಿ ನೀಡಿ ಕರಕುಶಲ ಉತ್ಪನ್ನಗಳನ್ನು ಖರೀದಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪಿಲಿಕುಳ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.


Spread the love