ಪಿಲಿಕುಳ: ಗುತ್ತು ಮನೆ, ಕುಶಲಕರ್ಮಿ ಗ್ರಾಮಕ್ಕೆ ವಿದೇಶಿ ಪ್ರವಾಸಿಗರ ಭೇಟಿ

Spread the love

ಪಿಲಿಕುಳ: ಗುತ್ತು ಮನೆ, ಕುಶಲಕರ್ಮಿ ಗ್ರಾಮಕ್ಕೆ ವಿದೇಶಿ ಪ್ರವಾಸಿಗರ ಭೇಟಿ

ಮಂಗಳೂರು: ನವಮಂಗಳೂರು ಬಂದರಿಗೆ ಶನಿವಾರ ಆಗಮಿಸಿದ್ದ ಸೆವೆನ್ ಸೀಸ್ ಮರೈನರ್ ಐμÁರಾಮಿ ಹಡಗಿನಲ್ಲಿ ಆಗಮಿಸಿದ್ದ ನೂರಾರು ವಿದೇಶಿ ಪ್ರವಾಸಿಗರು ಪಿಲಿಕುಳದ ಗುತ್ತುಮನೆ ಮತ್ತು ಕುಶಲಕರ್ಮಿ ಗ್ರಾಮಕ್ಕೆ ಭೇಟಿ ನೀಡಿದರು.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕುಶಲಕರ್ಮಿ ಗ್ರಾಮದಲ್ಲಿ ಮುಂದಿನ ತಲೆಮಾರಿಗೆ ಪಾರಂಪರಿಕವಾಗಿ ಉಳಿಸಿಕೊಂಡು ಬಂದಿರುವ ವಿವಿಧ ಕುಶಲಕರ್ಮಿ ವೃತ್ತಿಗಳ ನೈಜ ಅನುಭವ ಪ್ರವಾಸಿಗರನ್ನು ಆಕರ್ಷಿಸಿತು. ಇಲ್ಲಿ ಕುಂಬಾರಿಕೆ, ಕುಟ್ಟಣದ ಅವಲಕ್ಕಿ ತಯಾರಿಕೆ, ಎಣ್ಣೆ ಗಾಣದ ಕಾರ್ಯವಿಧಾನ, ಕಮ್ಮಾರಿಕೆ, ಬಡಗಿ ಕೆಲಸಗಳು ಹಾಗೂ ಬೆತ್ತ–ಬಿದಿರು ವಿಭಾಗಗಳಲ್ಲಿ ದೈನಂದಿನವಾಗಿ ನಡೆಯುವ ನೇರ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು.

ಪ್ರತಿ ವಿಭಾಗದಲ್ಲಿಯೂ ಕುಶಲಕರ್ಮಿಗಳು ತಮ್ಮ ತಮ್ಮ ಕೌಶಲ್ಯವನ್ನು ನೈಜವಾಗಿ ಪ್ರದರ್ಶಿಸುತ್ತಿರುವುದನ್ನು ಗಮನಿಸಿದ ಪ್ರವಾಸಿಗರು, ಪರಂಪರೆಯ ಈ ವೃತ್ತಿಗಳು ಇಂದಿಗೂ ಹೇಗೆ ಜೀವಂತವಾಗಿವೆ ಎಂಬುದರ ಬಗ್ಗೆ ಕುತೂಹಲದಿಂದ ವಿಚಾರಿಸಿದರು. ಗ್ರಾಮ್ಯ ಜೀವನ ಶೈಲಿ, ಪರಂಪರೆಯ ತಂತ್ರಜ್ಞಾನ, ಹಾಗೂ ಸ್ಥಳೀಯರ ಜೀವನೋಪಾಯಕ್ಕೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ಮಾರ್ಗದರ್ಶಕರಿಂದ ಪಡೆದುಕೊಂಡರು. ಒಟ್ಟು 200 ಕ್ಕಿಂತಲೂ ಹೆಚ್ಚು ವಿದೇಶಿ ಪ್ರವಾಸಿಗರು ಪಿಲಿಕುಳಕ್ಕೆ ಭೇಟಿ ನೀಡಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments