ಪುಂಜಾಲಕಟ್ಟೆ: ಮನೆಯಿಂದ ರೂ. 1.80 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

Spread the love

ಪುಂಜಾಲಕಟ್ಟೆ: ಮನೆಯಿಂದ ರೂ. 1.80 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

ಮಂಗಳೂರು: ಮನೆಯಿಂದ ಕಳ್ಳರು ಸುಮಾರು ರೂ. 1.80 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕಳ ಗ್ರಾಮದ, ಪುಳಿಮಜಲು ನಿವಾಸಿ ಪುರುಷೋತ್ತಮ ಗೌಡ ಎಂಬವರ ನಿವಾಸದಿಂದ   ಯಾರೋ ಕಳ್ಳರು ಸುಮಾರು 60 ಗ್ರಾಂ ತೂಕದ ಚಿನ್ನಾಭರಣಗಳು ಕಳವು ಮಾಡಿಕೊಂಡು ಹೋಗಿದ್ದು. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ 1,80,000/- ಆಗಬಹುದು.

ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ಕಲಂ: 454, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.


Spread the love