ಪುದುಚೇರಿ ಉಪರಾಜ್ಯಪಾಲೆ ಡಾ. ಕಿರಣ್ ಬೇಡಿ ಪ್ರವಾಸ

Spread the love

ಪುದುಚೇರಿ ಉಪರಾಜ್ಯಪಾಲೆ ಡಾ. ಕಿರಣ್ ಬೇಡಿ ಪ್ರವಾಸ

ಮಂಗಳೂರು: ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಉಪರಾಜ್ಯಪಾಲೆ ಡಾ. ಕಿರಣ್ ಬೇಡಿ ಅವರು ಡಿ.15ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.

ಡಿಸೆಂಬರ್ 15 ರಂದು ಮಧ್ಯಾಹ್ನ 3.45 ಗಂಟೆಗೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ, ಸಂಜೆ 6.45 ಗಂಟೆಗೆ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ರಾತ್ರಿ ಮಂಗಳೂರಿನಲ್ಲಿ ವಾಸ್ತವ್ಯ. ಡಿಸೆಂಬರ್ 16 ರಂದು ಬೆಳಿಗ್ಗೆ 9.35 ಗಂಟೆಗೆ ವಿಮಾನದ ಮೂಲಕ ಚೆನೈಗೆ ತೆರಳಲಿದ್ದಾರೆ.


Spread the love