ಪೆನ್ಸಿಲ್ ಬಾಕ್ಸ್ ಚಿತ್ರದ ಪೋಸ್ಟರ್ ಬಿಡುಗಡೆ

Spread the love

ಪೆನ್ಸಿಲ್ ಬಾಕ್ಸ್ ಚಿತ್ರದ ಪೋಸ್ಟರ್ ಬಿಡುಗಡೆ

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದಲ್ಲಿ ಪೆನ್ಸಿಲ್ ಬಾಕ್ಸ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭಹಾರೈಸಿದರು. ಈ ವೇಳೆ ನಿರ್ಮಾಪಕ, ದಯಾನಂದ ರೈ, ನಿರ್ದೇಶಕ ರಜಾಕ್ ಪುತ್ತೂರು, ನಾಯಕಿ ದೀಕ್ಷಾ.ಡಿ.ರೈ, ಗಾಯಕಿ ಕ್ಷೀತಿ.ಕೆ.ರೈ, ನಟರು ರಮೇಶ್ ಕುಕ್ಕುವಳ್ಳಿ. ಜಯಕೀರ್ತಿ. ಚುಮನ್ ಮಣಿಕಂಠ. ಅರುಣ್ ಕುಮಾರ್. ವಿಜಯಕುಮಾರ್ ಅಳದಂಗಡಿ, ಧನಂಜಯ ಆಚಾರ್ಯ. ಕಿರಣ್ ಶೆಟ್ಟಿ ಬೆಳ್ತಂಗಡಿ. ಪ್ರೇಮ್ ರಾಜ್. ಪ್ರದೀಪ್ ಪಾಣಾಜೆ ಮತ್ತಿತರರು ಉಪಸ್ಥಿತರಿದ್ದರು.

ದೃಶ್ಯ ಮೂವೀಸ್ ಬ್ಯಾನರಿನಲ್ಲಿ ದಯಾನಂದ್ ಎಸ್ ರೈ ನಿರ್ಮಾಣದಲ್ಲಿ ತಯಾರಾಗುತ್ತಿರುವ ಪೆನ್ಸಿಲ್‍ಬಾಕ್ಸ್ ಕನ್ನಡ ಚಲನ ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದ್ದು ಮುಂದಿನ ಹಂತದ ಕಾರ್ಯಗಳು ಬಿರುಸಿನಿಂದ ನಡೆಯುತ್ತಿದೆ.

ಸ್ಟಾರ್ ಸುವರ್ಣ ಡಾನ್ಸ್ ಡಾನ್ಸ್ ಹಾಗೂ ಭರ್ಜರಿ ಕಾಮಿಡಿ ರಿಯಾಲಿಟಿ ಶೋ ಮೂಲಕ ಕರ್ನಾಟಕದಲ್ಲಿ ಮನೆಮಾತಾದ ದೀಕ್ಷಾ ಡಿ ರೈ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಕರಾವಳಿಯ ಖ್ಯಾತ ನಟರಾದ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಹಾಗೂ ರಮೇಶ್ ರೈ ಕುಕ್ಕುವಳ್ಳಿ ಮುಂತಾದವರ ಅಭಿನಯವಿದೆ. ಸಂಪೂರ್ಣವಾಗಿ ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಚಿತ್ರದಲ್ಲಿ ಒಟ್ಟು ಮೂರು ಸುಮಧುರ ಹಾಡುಗಳಿದ್ದು ಸರಿಗಮಪ ಖ್ಯಾತಿಯ ಕ್ಷಿತಿ ಕೆ ರೈ ಧರ್ಮಸ್ಥಳ ಹಾಗೂ ಕನ್ನಡ ಕೋಗಿಲೆ ಖ್ಯಾತಿಯ ಅಪೇಕ್ಷ ಪೈ ಸರಿಗಮಪ ಖ್ಯಾತಿಯ ಡಾ ಅಭಿಷೇಕ್ ರಾವ್, ವೈಷ್ಣವಿ ಮಣಿಪಾಲ, ಜನ್ಯ ಪ್ರಸಾದ್, ಮುಂತಾದವರ ಅದ್ಭುತ ಧ್ವನಿ, ಕ್ಲೈಮಾಕ್ಸ್‍ನಲ್ಲಿ ಬರುವ ವಿಶೇಷ ನೃತ್ಯ ವೈಭವ ಚಿತ್ರದ ಹೈಲೈಟ್ ಆಗಲಿದೆ. ರಝಾಕ್ ಪುತ್ತೂರು ಕಥೆ, ಚಿತ್ರ ಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಮೋಹನ್ ಪಡ್ರೆ ಇವರ ಕ್ಯಾಮರಾ ಕೈ ಚಳಕವಿದೆ. ಜಯಕಾರ್ತಿ ಸಂಗೀತ ಸಂಯೋಜನೆ ಕನ್ನಡ ಚಿತ್ರ ರಂಗದಲ್ಲಿ ಭರವಸೆಯನ್ನು ಮೂಡಿಸುತ್ತದೆ.

ಡಿಪಿನ್ ದಿವಾಕರ್ ಸಂಕಲನ ಮಾಡಿದ್ದಾರೆ. ಸಹ ನಿರ್ದೇಶಕರಾಗಿ ಎಸ್.ಪಿ ಸೆಲ್ವಂ, ಸುಜಿತ್ ಎಸ್ ಪಾಟಾಲಿ, ಅಕ್ಷತ್ ವಿಟ್ಲ ಕಾರ್ಯ ನಿರ್ವಹಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಪೆನ್ಸಿಲ್ ಬಾಕ್ಸ್ ಚಿತ್ರವು ಚಿತ್ರ ರಂಗದಲ್ಲಿ ಭಾರಿ ನಿರೀಕ್ಷೆಯನ್ನು ಮೂಡಿಸಿದೆ.


Spread the love