ಪೊಲೀಸರನ್ನು ಬೆಂಬಿಡದೆ ಕಾಡುತ್ತಿದೆ ಕೊರೋನಾ – ಕುಂದಾಪುರ ಟ್ರಾಪಿಕ್ ಹೆಡ್ ಕಾನ್ಸ್ ಟೇಬಲ್ ಗೆ ಪಾಸಿಟಿವ್

Spread the love

ಪೊಲೀಸರನ್ನು ಬೆಂಬಿಡದೆ ಕಾಡುತ್ತಿದೆ ಕೊರೋನಾ – ಕುಂದಾಪುರ ಟ್ರಾಪಿಕ್ ಹೆಡ್ ಕಾನ್ಸ್ ಟೇಬಲ್ ಗೆ ಪಾಸಿಟಿವ್

ಕುಂದಾಪುರ: ಕೊರೊನಾ ಮಹಾ ಮಾರಿ ಕೊರೋನಾ ವಾರಿಯರ್ಸ್ ಎನಿಸಿಕೊಂಡಿರುವ ಪೊಲೀಸರನ್ನು ಇನ್ನಿಲ್ಲದಂತೆ ಕಾಡುತ್ತಿದ್ದು , ಉಡುಪಿ ಜಿಲ್ಲೆಯಲ್ಲಿ ಭಾನುವಾರ ಮತ್ತೋರ್ವ ಪೊಲೀಸ್ ಅಧಿಕಾರಿಗೆ ಸೋಂಕು ದೃಢಗೊಂಡಿದೆ

ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ 59ವರ್ಷದ ಹೆಡ್ ಕಾನ್ಸ್ ಟೇಬಲ್ ಅವರಿಗೆ ಭಾನುವಾರ ಕೊರೋನಾ ಪಾಸಿಟಿವ್ ದೃಢಗೊಂಡಿದ್ದು ಕುಂದಾಪುರ ಸಂಚಾರಿ ಪೊಲೀಸ್ ಠಾಣೆ, ಸಿಬ್ಬಂದಿಯಿದ್ದ ಕ್ವಾಟ್ರಸ್ ಸೀಲ್ ಡೌನ್ ಮಾಡಲಾಗಿದೆ. ಪೊಲೀಸ್ ಠಾಣೆಯಲ್ಲಿ ಸ್ಯಾನಿಟೈಜ್ ಮಾಡುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಎರಡು ದಿನ ಕುಂದಾಪುರ ಪ್ರವಾಸಿ ಮಂದಿರಕ್ಕೆ ಶಿಫ್ಟ್ ಮಾಡಲಾಗಿದೆ.

ಕೊರೋನಾ ಪಾಸಿಟಿವ್ ದೃಢಗೊಂಡ ಹೆಡ್ ಕಾನ್ಸ್ ಟೇಬಲ್ ಅವರನ್ನು ಕುಂದಾಪುರ ಕೋವಿಡ್ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ.


Spread the love