ಬಿ.ಎಸ್.ವೈ ಭೇಟಿಯಾದ ‘ಲೀವಾ ಮಿಸ್ ದೀವಾ ಯೂನಿವರ್ಸ್-2020’ ಅಡ್ಲೀನ್ ಕ್ಯಾಸ್ಟಲಿನೊ

Spread the love

ಬಿ.ಎಸ್.ವೈ ಭೇಟಿಯಾದ ‘ಲೀವಾ ಮಿಸ್ ದೀವಾ ಯೂನಿವರ್ಸ್-2020’ ಅಡ್ಲೀನ್ ಕ್ಯಾಸ್ಟಲಿನೊ

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು, ‘ಲೀವಾ ಮಿಸ್ ದೀವಾ ಯೂನಿವರ್ಸ್-2020’ ಸೌಂದರ್ಯ ಸ್ಪರ್ಧೆ ವಿಜೇತೆ, ಉಡುಪಿಯ ಕುಮಾರಿ ಅಡ್ಲೀನ್ ಕ್ಯಾಸ್ಟಲಿನೊ ಭೇಟಿ ಮಾಡಿದರು.

ಕನ್ನಡತಿ ಕುಮಾರಿ ಅಡ್ಲೀನ್ ಕ್ಯಾಸ್ಟಲಿನೊ ಅವರನ್ನು ಅಭಿನಂದಿಸಿದ ಮುಖ್ಯಮಂತ್ರಿಗಳು, ‘ಮಿಸ್ ಯೂನಿವರ್ಸ್’ ಸ್ಪರ್ಧೆಯಲ್ಲಿಯೂ ಸಫಲರಾಗುವಂತೆ ಹಾರೈಸಿದರು.

ಲಿವಾ ಫ್ಲೂಯಿಡ್ ಷ್ಯಾಷನ್ ಮಾಲೀಕತ್ವದ ಮಿಸ್ ದಿವಾ 2020ಯ 8ನೇ ಆವೃತ್ತಿಯ ಸ್ಪರ್ಧೆ ಫೆಬ್ರವರಿ 22ರಂದು ಮುಂಬೈನ ಅಂಧೇರಿ ವೆಸ್ಟ್ನಲ್ಲಿರುವ ಯಶ್ ರಾಜ್ ಸ್ಟುಡಿಯೋದಲ್ಲಿ ನಡೆದಿತ್ತು. ದೇಶಾದ್ಯಂತ ಆಯ್ದ 20 ಸ್ಪರ್ಧಿಗಳು ಅಂತಿಮ ಸುತ್ತಿನ ಹಣಾಹಣಿಯಲ್ಲಿ ಭಾಗವಹಿಸಿದ್ದರು. ಕೊನೆಗೆ ಲೀವಾ ಮಿಸ್ ದಿವಾದ ಮಿಸ್ ಯೂನಿವರ್ಸ್ ಇಂಡಿಯಾ 2020ರ ಕಿರೀಟವನ್ನು ಉಡುಪಿಯ ಅಡ್ಲೀನ್ ಕ್ಯಾಸ್ಟಲಿನೊ ಮುಡಿಗೇರಿಸಿಕೊಂಡರು. 2019ರ ಮಿಸ್ ಯೂನಿವರ್ಸ್ ಇಂಡಿಯಾ ವರ್ತಿಕಾ ಸಿಂಗ್ ಅವರು ಬೆಳ್ಳಿ ಕಿರೀಟವನ್ನು ಅಡ್ಲೀನ್ಗೆ ತೊಡಿಸಿದರು. ಇದೇ ಅಡ್ಲೀನ್ ಕ್ಯಾಸ್ಟಲಿನೋ ಮಿಸ್ ಯೂನಿವರ್ಸ್ 2020ರ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.


Spread the love