ಭಾರೀ ಮಳೆಗೆ ಬಲ್ಮಠ ರಸ್ತೆಯಲ್ಲಿ ಮಹಾರಾಜ ರೆಸಿಡೆನ್ಸಿ ಅಪಾರ್ಟ್ ಮೆಂಟ್ ಮರ ಧರಶಾಹಿ

Spread the love

ಭಾರೀ ಮಳೆಗೆ ಬಲ್ಮಠ ರಸ್ತೆಯಲ್ಲಿ ಮಹಾರಾಜ ರೆಸಿಡೆನ್ಸಿ ಅಪಾರ್ಟ್ ಮೆಂಟ್ ಮರ ಧರಶಾಹಿ

ಮಂಗಳೂರು: ಗುರುವಾರ ಬೆಳಿಗ್ಗೆ ಸುರಿದ ಭಾರೀ ಧಾರಾಕಾರ ಗಾಳಿ ಮಳೆಗೆ ನಗರದ ಬಲ್ಮಠ ರಸ್ತೆಯಲ್ಲಿರುವ ಮಹಾರಾಜಾ ರೆಸಿಡೆನ್ಸಿ ಅಪಾರ್ಟ್ಮೆಂಟ್ ನ ಮೇಲೆ 3 ಮರಗಳು ಉರುಳಿ ಬಿದ್ದ ಕಾರಣ ಲಕ್ಷಾಂತರ ರುಪಾಯೀ ನಷ್ಟವಾಗಿದೆ .

ಗುರುವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಈ ಘಟನೆ ಸಂಭವಿಸಿದ್ದು, ಅಪಾರ್ಟ್ಮೆಂಟ್ ನ ಪಾರ್ಕಿಂಗ್ ಸ್ಥಳದಲ್ಲಿದ್ದ ದ್ವಿಚಕ್ರ ವಾಹನಗಳಿಗೂ ಹಾನಿ ಆಗಿದೆ.ಅಪಾರ್ಟ್ಮೆಂಟ್ ನ ಆವರಣ ಗೋಡೆಗೂ ಹಾನಿ ಆಗಿದೆ.

ಸ್ಥಳಕ್ಕೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love