ಮಂಗಳೂರು: ಡೆಂಗ್ ಜ್ವರ ಶಂಕೆ; ಯುವಕ ಮೃತ್ಯು

Spread the love

ಮಂಗಳೂರು: ಡೆಂಗ್ ಜ್ವರ ಶಂಕೆ; ಯುವಕ ಮೃತ್ಯು

ಮಂಗಳೂರು : ಶಂಕಿತ ಡೆಂಗ್ ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಮೃತಪಟ್ಟ ಘಟನೆ ರವಿವಾರ ನಡೆದಿದೆ.

ತೊಕ್ಕೊಟ್ಟು ನಿವಾಸಿ ಹರೀಶ್ ಗಟ್ಟಿ,ಮಮತಾ ಗಟ್ಟಿ ದಂಪತಿ ಹಿರಿಯ ಪುತ್ರ ಹರ್ಷಿತ್ ಗಟ್ಟಿ (23) ಮೃತ ಯುವಕ ಎಂದು ಗುರುತಿಸಲಾಗಿದೆ.

ಜ್ವರದಿಂದ ಬಳಲುತ್ತಿದ್ದ ಅವರು ಶನಿವಾರ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರಿಗೆ ಡೆಂಗ್ ಇರುವುದು ತಿಳಿದುಬಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಹರ್ಷಿತ್ ಸಾವನ್ನಪ್ಪಿದ್ದಾರೆ.


Spread the love