ಮಂಗಳೂರು | ದ್ವಿಚಕ್ರ ವಾಹನ ಚಲಾಯಿಸಿದ ಬಾಲಕ; ಮಾಲಕಿಗೆ 26,000 ರೂ.ದಂಡ

Spread the love

ಮಂಗಳೂರು | ದ್ವಿಚಕ್ರ ವಾಹನ ಚಲಾಯಿಸಿದ ಬಾಲಕ; ಮಾಲಕಿಗೆ 26,000 ರೂ.ದಂಡ

ಮಂಗಳೂರು: ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಸವಾರ ಮಾಡಿದ ಆರೋಪದ ಹಿನ್ನಲೆಯಲ್ಲಿ ವಾಹನದ ಮಾಲಕಿಗೆ ಮಂಗಳೂರಿನ ನಾಲ್ಕನೆ ಜೆಎಂಎಫ್‌ಸಿ ನ್ಯಾಯಾಲಯ ದಂಡ ವಿಧಿಸಿದೆ.

ದ್ವಿಚಕ್ರ ವಾಹನವನ್ನು ಅದರ ಮಾಲಕಿ ಅತಿಜಮ್ಮರ ಅಪ್ರಾಪ್ತ ವಯಸ್ಸಿನ ಪುತ್ರ ಅ.10ರಂದು ಬೈಕಂಪಾಡಿಯಲ್ಲಿ ಚಲಾಯಿಸುತ್ತಿದ್ದ. ಈ ಬಗ್ಗೆ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ನ್ಯಾಯಾಲಯವು ವಿಚಾರಣೆ ನಡೆಸಿ ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ್ದಕ್ಕೆ ವಾಹನದ ಮಾಲಕಿಗೆ 26,000 ರೂ.ದಂಡ ವಿಧಿಸಿ ಅದೇಶಿದೆ.


Spread the love
Subscribe
Notify of

0 Comments
Inline Feedbacks
View all comments