ಮಂಗಳೂರು ಧರ್ಮಪ್ರಾಂತ್ಯ ವತಿಯಿಂದ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಗೆ ಸನ್ಮಾನ

Spread the love

ಮಂಗಳೂರು ಧರ್ಮಪ್ರಾಂತ್ಯ ವತಿಯಿಂದ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಗೆ ಸನ್ಮಾನ

ಮಂಗಳೂರು : ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 587 (97.8%) ಅಂಕ ಗಳಿಸಿ, ನಾಲ್ಕು ವಿಷಯಗಳಲ್ಲಿ ತಲಾ 100 ಅಂಕ ಗಳಿಸಿ (ಇತಿಹಾಸ, ರಾಜ್ಯಶಾಸ್ರ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ) ರಾಜ್ಯಕ್ಕೆ ಏಳನೇ  ಸ್ಥಾನ ಮತ್ತು ದ.ಕ.ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕು| ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಶ್ರೀ ರೊನಾಲ್ಡ್ ಫೆರ್ನಾಂಡಿಸ್ ಮತ್ತು ಶ್ರೀಮತಿ ನ್ಯಾಸ್ಸಿ ಡೊರತಿ ಫೆರ್ನಾಂಡಿಸ್ ದಂಪತಿಯವರ ಪುತ್ರಿ ಇವರಿಗೆ ಮಂಗಳೂರು ಧರ್ಮಪ್ರಾಂತ್ಯ ವತಿಯಿಂದ ಸನ್ಮಾನಿಸಲಾಯಿತು.

ಮಂಗಳೂರು ಧರ್ಮಪ್ರಾಂತ್ಯದ ಧರ್ಮದ್ಯಕ್ಷರು ಅತೀ ವಂದನೀಯ ಡಾ|ಫಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರು ಫಲಪುಷ್ಪ ನೀಡಿ ಸನ್ಮಾನಿಸಿದರು.

ಕಥೊಲಿಕ್ ಸಭೆಯ ಅಧ್ಯಕ್ಷರಾದ ರೊಲ್ಫಿ ಡಿಕೋಸ್ತಾ ಮತ್ತು ಸುರತ್ಕಲ್ ವಲಯದ ಅಧ್ಯಕ್ಷರಾದ ಶ್ರೀ ರಸ್ಸಲ್ ರೊಚ್ರವರು ಉಪಸ್ಥಿತರಿದ್ದರು.


Spread the love