ಮಂಗಳೂರು ನಗರಕ್ಕೆ ಹೊಸ ಯುಜಿಡಿ ಯೋಜನೆ : ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.

Spread the love

ಮಂಗಳೂರು ನಗರಕ್ಕೆ ಹೊಸ ಯುಜಿಡಿ ಯೋಜನೆ : ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.

ಅಂದಾಜು 1200 ಕೋಟಿ ರೂ. ವೆಚ್ಚ- ಮುಂಬರುವ ಬಜೆಟ್ನಲ್ಲಿ ಮಂಡನೆ ಮನಪಾ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಯಿಂದ ಫೋನ್ ಇನ್

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರನ್ನು ಕಾಡುತ್ತಿರುವ ಒಳಚರಂಡಿ ವ್ಯವಸ್ಥೆ (ಮನೆ, ಅಪಾರ್ಟ್ಮೆಂಟ್ಗಳ ಕೊಳಚೆ ನೀರು ಹರಿಯುವ)ಯನ್ನು ಸಮರ್ಪಕಗೊಳಿಸಲು 1200 ಕೋಟಿರೂ.ಗಳ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ದ.ಕ. ಜಿಲ್ಲಾಧಿಕಾರಿಯವರು ಇಂದು ಮನಪಾ ಮೇಯರ್ ಕೊಠಡಿಯಲ್ಲಿ ಫೋನ್ ಇನ್ ಮೂಲಕ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ವೇಳೆ ಸುದ್ದಿಗಾರರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಮಳೆ ನೀರು ಹರಿಯುವ ಚರಂಡಿಗಳಲ್ಲಿ ಅಪಾರ್ಟ್ಮೆಂಟ್, ಮನೆಗಳ ಕೊಳಚೆ ನೀರು ಹರಿಯುತ್ತಿರುವುದು, ರಾಜಕಾಲುವೆಗಳಿಗೆ ಕೊಳಚೆ ನೀರು ಸೇರುತ್ತಿರುವ ಸಮಸ್ಯೆಗಳ ಕುರಿತಂತೆ ಹಲವು ಸಾರ್ವಜನಿಕರು ಫೋನ್ ಕರೆಗಳ ಮೂಲಕ ದೂರು ನೀಡಿದರು.

ಅಪಾರ್ಟ್ಮೆಂಟ್ಗಳ ನಿರ್ಮಾಣದ ಸಂದರ್ಭ ಪ್ರತ್ಯೇಕ ಎಸ್ಟಿಪಿಗಳನ್ನು ನಿರ್ವಹಿಸುವ ನಿಯಮ ಜಾರಿಯಲ್ಲಿದೆ. ಆದರೆ ಹಳೆ ಅಪಾರ್ಟ್ಮೆಂಟ್ಗಳಲ್ಲಿ ಈ ವ್ಯವಸ್ಥೆ ಇಲ್ಲ. ಹೊಸ ಅಪಾರ್ಟ್ಮೆಂಟ್ಗಳಲ್ಲಿ ಎಸ್ಟಿಪಿಗಳು ಕಾರ್ಯ ನಿರ್ವಹಿಸದೆ ಸಮಸ್ಯೆಯಾಗಿರುವುದು ಕಂಡು ಬಂದಿದೆ. ಹಾಗಾಗಿ ನಗರದ ಸಮಗ್ರ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ಮುಂದಿನ ಆರು ವರ್ಷಗಳ ಜನಸಂಖ್ಯೆಯನ್ನು ಆಧರಿಸಿ ಯುಜಿಡಿ ಪ್ಲಾನ್ ಸಿದ್ದವಾಗಲಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿಸಚಿವರು ಸಭೆ ನಡೆಸಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಜತೆಗೂ ಚರ್ಚೆಯಾಗಿದೆ. ಮುಂದಿನ ಬಜೆಟ್ನಲ್ಲಿ ಈ ಯೋಜನೆಯನ್ನು ಮಂಡಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 30 ಕರೆಗಳು ಸ್ವೀಕೃತವಾಗಿದ್ದು, ಸಣ್ಣಪುಟ್ಟ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ವಹಿಸುವಂತೆ ಸೂಚಿಸಿದರು.ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಹಾಗೂ ಪಾಲಿಕೆಯ ಇತರ ಹಿರಿಯ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

*ಪೊಲೀಸ್ ಲೇನ್ ಬಳಿ ತೆರೆದ ಚರಂಡಿಗೆ ಕೊಳಚೆ ನೀರು ಬಿಡಲಾಗುತ್ತಿದೆ. ಬೀದಿನಾಯಿಗಳ ಸಮಸ್ಯೆಯೂ ಹೆಚ್ಚಾಗಿದೆ.

*ಬೆಳಗ್ಗಿನ ಹೊತ್ತು ಕೊಟ್ಟಾರ ಚೌಕಿ ಬಳಿ ವಾಹನಗಳು ಅತ್ಯಂತ ವೇಗವಾಗಿ ಸಂಚರಿಸುವುದರಿಂದ ವಾಕಿಂಗ್ ಹೋಗುವವರಿಗೆ ಸಮಸ್ಯೆಯಾಗುತ್ತಿದೆ. ರಸ್ತೆ ಬದಿಗಳಲ್ಲಿಯೇ ತ್ಯಾಜ್ಯ ಎಸೆಯಲಾಗುತ್ತದೆ. ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ.

*ಎಕ್ಕೂರಿನ ಮನೆ ಪಕ್ಕದ ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ವಾಸನೆಯಿಂದ ಮನೆಯ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಸೊಳ್ಳೆಯ ಕಾಟ. ಪಾಲಿಕೆಗೆ ದೂರು ನೀಡಿದರೆ ತೋಡಿನ ಹೂಳು ತೆಗೆಯುತ್ತಾರೆ. ತೆಗೆದ ಹೂಳನ್ನು ಅಲ್ಲೇ ಮೇಲೆಹಾಕಿ ಹೋಗುವುದರಿಂದ ಮತ್ತೆ ಅದು ರಾಜಕಾಲುವೆ ಸೇರುತ್ತದೆ.

‘ಕಾವೂರು ಜಂಕ್ಷನ್ ಬಳಿ ಝೀಬ್ರಾ ಕ್ರಾಸಿಂಗ್ ಇಲ್ಲ.

“ನಾಗುರಿ ಬಳಿ ಕೊಳಚೆ ನೀರು ಮಳೆ ನೀರು ಹರಿಯುವ ಚರಂಡಿಯಲ್ಲಿ ಹರಿಸಲಾಗುತ್ತಿದ್ದು, ವಾಸನೆ ಅಸಹನೀಯವಾಗಿದೆ.

*ಲೇಡಿಹಿಲ್, ಗೋರಿಗುಡ್ಡ ಬೊಂದೇಲ್ ಮೊದಲಾದ ಕಡೆ ಸಂಜೆ 4.30ರಿಂದ ಬೆಳಗ್ಗೆ 8 ಗಂಟೆಯವರೆಗೆ ಬೀದಿ ದೀಪಗಳು ಉರಿಯುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ಗೆ ಕರೆ ಮಾಹಿತಿ ನೀಡಿದ್ದರೂ ಕ್ರಮ ಆಗಿಲ್ಲ.

*ತ್ಯಾಜ್ಯ ಕೊಂಡೊಯ್ಯುವ ಸಣ್ಣ ವಾಹನಗಳಿಂದ ದೊಡ್ಡ ವಾಹನಗಳಿಗೆ ತ್ಯಾಜ್ಯವನ್ನು ಅಲ್ಲಲ್ಲಿ ಪ್ರಮುಖ ರಸ್ತೆಗಳಲ್ಲೇ ವರ್ಗಾಯಿಸಲಾಗುತ್ತಿದೆ. ಇದಕ್ಕೆ ನಿರ್ದಿಷ್ಟ ಜಾಗವನ್ನು ನಿಗದಿಪಡಿಸಬೇಕು.

*ಜಲಸಿರಿಯಡಿ ಪೈಪ್ಲೈನ್ ಅಳವಡಿಸಲಾಗಿದ್ದು, ನೀರು ಬರದಿದ್ದರೂ ಮೀಟರ್ ಓಡುತ್ತಿದೆ.

* ಪಾಂಡೇಶ್ವರದ ದೂಮಪ್ಪ ಕಂಪೌಂಡ್ ಬಳಿ ಮಲೆ ನೀರು ಮನೆಯೊಳಗೆ ಬರುತ್ತಿದೆ. ಸಾಕಷ್ಟು ದೂರು ನೀಡಿದ್ದರೂ ಪರಿಹಾರವಾಗಿಲ್ಲ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳತದ ವೇಳೆ ಮೇಯರ್ರಿಂದ ಜನರ ಸಮಸ್ಯೆ ಆಲಿಸಲು ಫೋನ್ ಇನ್ ಕಾರ್ಯಕ್ರಮ ಜಾರಿಯಲ್ಲಿತ್ತು. ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತಾವಧಿ 2025ರ ಫೆ. 27ರಂದು ಕೊನೆಗೊಂಡಿತ್ತು. ಬಳಿಕ ನಿಯಮದಂತೆ ದ.ಕ. ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿದ್ದಾರೆ. ಕಳೆದ ಸುಮಾರು 10 ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿಯಿಂದ ಫೋನ್ಇನ್ ಮೂಲಕ ಸಾರ್ವಜನಿಕರಿಂದ ದೂರುಗಳನ್ನು ಆಲಿಸಲಾಯಿತು.

ಉತ್ತಮ ಅಂಕಗಳನ್ನು ಪಡೆದಿದ್ದ ನನ್ನ ಮಗಳನ್ನು ಬಿಎಸ್ಸಿ ನರ್ಸಿಂಗ್ ಓದಿಸಲು ನಗರದ ಖಾಸಗಿ ಕಾಲೇಜಿಗೆ ದಾಖಲು ಮಾಡಲಾಗಿತ್ತು. ಶುಲ್ಕವನ್ನು ಭರಿಸಲಾಗಿತ್ತು. ಈ ನಡುವೆ ಸರಕಾರಿ ಕೋಟದಡಿ ಆಕೆಗೆ ಸೀಟು ಲಭ್ಯವಾದ ಹಿನ್ನೆಲೆಯಲ್ಲಿ ಆಕೆಯ ಕಾಲೇಜು ಬದಲಾಯಿಸಲಾಯಿತು. ಆದರೆ ಈ ಮೊದಲು ದಾಖಲಾಗಿದ್ದ ಖಾಸಗಿ ಕಾಲೇಜಿನವರು ಆಕೆಯ NEW ಶೈಕ್ಷಣಿಕ ದಾಖಲಾತಿ ಮೂಲಪ್ರತಿಯನ್ನು ಹಿಂತಿರುಗಿಸುತ್ತಿಲ್ಲ. ಕಟ್ಟಿದ ಹಣ ಬೇಡ. ಕನಿಷ್ಟ ಮೂಲ ದಾಖಲೆ ನೀಡುವಂತೆ ಕಳೆದ ನಾಲೈದು ತಿಂಗಳಿನಿಂದ ಮನವಿ ಮಾಡುತ್ತಿದ್ದರೂ ಸ್ಪಂದಿಸಿಲ್ಲ. ಇದಕ್ಕೊಂದು ನ್ಯಾಯ ಕೊಡಿ ಎಂದು ಕೊಟ್ಟಾರ ಚೌಕಿಯಿಂದ ಕರೆ ಮಾಡಿದ ಮಹಿಳೆಯೊಬ್ಬರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು


Spread the love
Subscribe
Notify of

0 Comments
Inline Feedbacks
View all comments