ಮಂಗಳೂರು: ನಿಧಿ ಶೆಣೈಗೆ ರಾಜ್ಯ 13 ವಯೋಮಿತಿಯ ಬಾಲಕಿಯರ ಚೆಸ್ ಪ್ರಶಸ್ತಿ

Spread the love

ಮಂಗಳೂರು: ಎಪ್ರೀಲ್ 20ರಿಂದ 24ರವರೆಗೆ ಬೆಂಗಳೂರಿನಲ್ಲಿ ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಶನ್ ಆಶ್ರಯದಲ್ಲಿ ಜರುಗಿದ 13 ವರ್ಶ ವಯೋಮಿತಿಯ ಬಾಲಕಿಯರ ಚೆಸ್ ಛಾಂಪಿಯನ್ಶಿಪ್ನಲ್ಲಿ ಡೆರಿಕ್ಸ್ ಚೆಸ್ ಸ್ಕೂಲ್ ಪ್ರತಿಭೆ ನಿಧಿ ಶೆಣೈ 9 ಸುತ್ತುಗಳ ಸ್ವಿಸ್ ಲೀಗ್ ಪಂದ್ಯಾವಳಿಯಲ್ಲಿ 8 ಅಂಕಗಳನ್ನು ಗಳಿಸಿ ಪ್ರಥಮ ಪ್ರಶಸ್ತಿಯನ್ನು ಪಡೆದಿರುತ್ತಾಳೆ.

NidhiShenoy

ತನ್ಮೂಲಕ ಆಗಸ್ಟ್ನಲ್ಲಿ ಹರ್ಯಾಣದಲ್ಲಿ ಜರುಗಲಿರುವ ರಾಷ್ಟ್ರೀಯ ಛಾಂಪಿಯನ್ಶಿಪ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾಳೆ. ನಿಧಿ ಶೆಣೈ ಮಂಗಳೂರಿನ ಸಂತ ಥೆರೇಸಾ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿನಿ.


Spread the love