ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಮಹಿಳಾ ಸಿಬಂದಿಗೆ ಸಹೋದ್ಯೋಗಿಗಳಿಂದ ಸೀಮಂತ

Spread the love

ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಮಹಿಳಾ ಸಿಬಂದಿಗೆ ಸಹೋದ್ಯೋಗಿಗಳಿಂದ ಸೀಮಂತ

ಮಂಗಳೂರು:  ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಮಹಿಳಾ ಸಿಬಂದಿಗೆ ಸಹೋದ್ಯೋಗಿಗಳು ಸೀಮಂತ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಿದ್ದರು.

ಮಂಗಳೂರು ಪೂರ್ವ ಪೊಲೀಸ್ ಠಾಣಾ ಮಹಿಳಾ ಸಿಬಂದಿಯಾದ ಗೌರವ್ವ ಎಂಬವರಿಗೆ ಠಾಣಾ ಪೊಲೀಸ್  ನಿರೀಕ್ಷಕರಾದ ಶಾಂತಾರಾಮ್ ಹಾಗೂ ಠಾಣೆಯ ಇತರ ಅಧಿಕಾರಿಗಳು ಸಿಬಂದಿಗಳು ಸೀಮಂತ ಕಾರ್ಯಕ್ರಮವನ್ನು ನಗರದ ಸಂತ ಸೆಬಾಸ್ಟಿಯನ್ ಸಭಾಂಗಣ ಬೆಂದೂರಿನಲ್ಲಿ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಗೌರವ್ವ ಅವರ ಪತಿ ಶಿವಾನಂದ ಮತ್ತು ಅವರ ಮನೆಯವರು ಭಾಗವಹಿಸಿದ್ದರು.


Spread the love