ಮಂಗಳೂರು: ಯುವತಿಯೋರ್ವರ ಅಪಹರಣದ ಆರೋಪದ ಮೇಲೆ ಹಿಂದೂಸಂಘಟನೆಗೆ ಸೇರಿದ ಆರು ಮಂದಿ ಯುವಕರನ್ನು ಉರ್ವ ಪೋಲಿಸರು ಮೇ 7 ರಂದು ಬಂಧಿಸಿದ್ದಾರೆ.
ಪೋಲಿಸ್ ಮಾಹಿತಿಗಳ ಪ್ರಕಾರ ಅನ್ಯಕೋಮಿಗೆ ಸೇರಿದ ಯುವಕ ಮತ್ತು ಯುವತಿ ಜೊತೆಯಾಗಿ ಧಾರವಾಡದಿಂದ ಉಡುಪಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಬಸ್ಸನ್ನು ಉಡುಪಿಯಲ್ಲಿ ನಿಲ್ಲಿಸದೆ ನೇರವಾಗಿ ಮಂಗಳೂರಿಗೆ ತಂದು, ಕೆಲವು ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರು ಸೇರಿ ಮಂಗಳೂರಿನಲ್ಲಿ ಯುವಕನ್ನು ಥಳಿಸಿ ಯುವಕ ಯುವತಿಯನ್ನು ಉರ್ವ ಪೋಲಿಸರಿಗೆ ಒಪ್ಪಿಸಿದ್ದರು.
ಇದೇ ವೇಳೆ ಯುವಕನೊಂದಿಗೆ ಬಂದ ಮಹಿಳೆ ತನ್ನನ್ನು ಸಂಘಪರಿವಾರದವರು ಅಪಹರಿಸಿದ್ದಾರೆ ಎಂದು ಆರೋಪಿಸಿ ಉರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಅನ್ವಯ ಪೋಲಿಸರು 6 ಮಂದಿ ಯುವಕರನ್ನು ಬಂಧಿಸಿದ್ದಾರೆ. ಸುದ್ದಿ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಠಾಣೆಯ ಮುಂದೆ ಜಮಾಯಿಸಿ ಯುವಕರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.














