ಮಂಗಳೂರು ವಿಶ್ವದ್ಯಾನಿಲಯಕ್ಕೆ ದಕ್ಶಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಹಾಕಿ ಪಂದ್ಯಾಟದಲ್ಲಿ ಚಿನ್ನದ ಪದಕ

Spread the love

ಮಂಗಳೂರು ವಿಶ್ವದ್ಯಾನಿಲಯಕ್ಕೆ ದಕ್ಶಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಹಾಕಿ ಪಂದ್ಯಾಟದಲ್ಲಿ ಚಿನ್ನದ ಪದಕ

ಮಂಗಳೂರು: ದಿನಾಂಕ ನವೆಂಬರ್ 28ರಿಂದ ಡಿಸೆಂಬರ್ 2ರ ತನಕ ಅಳಗಪ್ಪ ವಿಶ್ವವಿದ್ಯಾನಿಲಯ ತಮಿಳುನಾಡು ಇಲ್ಲಿ ನಡೆದ ದಕ್ಷಿಣ ವಲಯ ಮಹಿಳೆಯರ ಹಾಕಿ ಪಂದ್ಯಾಟದಲ್ಲಿ ಚಿನ್ನ ಗೆದ್ದು ಅಖಿಲಭಾರತ ಮಟ್ಟಕ್ಕೆ ತೇರ್ಗಡೆಹೊಂದಿದೆ.

ಮಂಗಳೂರು ವಿಶ್ವವಿದ್ಯಾಲಯವು ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ತಮಿಳುನಾಡಿನ ಭಾರತೀಯಾರ್ ವಿಶ್ವವಿದ್ಯಾಲಯವನ್ನು 4-1 ಗೋಲುಗಳಿಂದ ಸೋಲಿಸಿ ಲೀಗ್ ಮಟ್ಟಕ್ಕೆ ಅರ್ಹತೆಯನ್ನು ಪಡೆಯಿತು. ಲೀಗ್ ಪಂದ್ಯಾವಳಿಯ ಪ್ರಥಮ ಪಂದ್ಯಾಟದಲ್ಲಿ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದೊಂದಿಗೆ 1-1 ಗೋಲುಗಳಿಂದ ಡ್ರಾ ಮಾಡಿಕೊಂಡಿತು. ಎರಡನೇ ಪಂದ್ಯದಲ್ಲಿ ಅಳಗಪ್ಪ ವಿಶ್ವವಿದ್ಯಾನಿಲಯದೊಂದಿಗೆ 1-0 ಗೋಲುಗಳಲ್ಲಿ ಜಯ ಪಡೆದು ಲೀಗ್ ನ ಕೊನೆಯ ಪಂದ್ಯದಲ್ಲಿ ತಮಿಳುನಾಡಿನ ಅಣ್ಣ ವಿಶ್ವವಿದ್ಯಾನಿಲಯದ ಎದುರು 2-0 ಗೋಲುಗಳ ಜಯ ಪಡೆದು ಚಿನ್ನದ ಪದಕವನ್ನು ಪಡೆಯಿತು.

ಈ ಪಂದ್ಯಾವಳಿಯಲ್ಲಿ ಅಣ್ಣಾ ವಿಶ್ವವಿದ್ಯಾಲಯವು ದ್ವಿತೀಯ, ಕ್ಯಾಲಿಕಟ್ ವಿಶ್ವವಿದ್ಯಾಲಯ, ತೃತೀಯ ಹಾಗೂ ಅಳಗಪ್ಪ ವಿಶ್ವವಿದ್ಯಾಲಯ ಚತುರ್ಥ ಸ್ಥಾನವನ್ನು ಪಡೆದಿದೆ.

ಮಂಗಳೂರು ವಿಶ್ವವಿದ್ಯಾಲಯದ ಮಹಿಳೆಯರ ತಂಡದಲ್ಲಿ ಪೂಜಾ ಎಂ.ಡಿ. (ತಂಡದ ನಾಯಕಿ), ನಿಶಾ ಪಿ.ಸಿ., ಚೆಲುವಾಂಭಾ ಆರ್, ಲೀಲಾವತಿ, ಕುಮುದಾ, ನಿವೇದಿತಾ ಎನ್, ಕೀರ್ತನ ಎಂ. ಎಸ್., ಮಿಲನ ಕೆ.ಪಿ., ಪವಿತ್ರ ಪಿ.ಎ., ವಿದ್ಯಾ ಕೆ.ಎಸ್., ಪ್ರಿಯದರ್ಶಿನಿ, ಸಂಗೀತಾ ಸಿ.ಜೆ. ಅನ್ನಪೂರ್ಣ ಆರ್, ಪಾರ್ವತಿ ಎಮ್, ಮೀನಾ ಟಿ. ಚೈತ್ರಾ ಕೆ.ಜೆ., ನಿರೀಕ್ಷಾ, ಮತ್ತುಹಿಮಾ ಜಾರ್ಜ್, ತಂಡದ ತರಬೇತುದಾರರಾಗಿ ಶ್ರೀಯುತ ನಾಚಪ್ಪ ಹಾಗೂ ತಂಡದ ವ್ಯವಸ್ಥಾಪಕರಾಗಿ ಶ್ರೀಮತಿ ರಾಖಿ ಪೂವಣ್ಣರವರು ಕಾರ್ಯ ನಿರ್ವಹಿಸಿರುತ್ತಾರೆ.


Spread the love