ಮಂಗಳೂರು: 1 ಗಂಟೆ ಎರಡು ನಿಮಿಷ ಅವಧಿಗೆ ೨೦ ಸೆಕೆಂಡ್ ಕಪೋತಾಸನದ ಭಂಗಿಯಲ್ಲಿ ದಾಖಲೆ ಮುರಿದ ಶರಣ್ಯ ಶರತ್!

Spread the love

ಮಂಗಳೂರು: 1 ಗಂಟೆ ಎರಡು ನಿಮಿಷ ಅವಧಿಗೆ ೨೦ ಸೆಕೆಂಡ್ ಕಪೋತಾಸನದ ಭಂಗಿಯಲ್ಲಿ ದಾಖಲೆ ಮುರಿದ ಶರಣ್ಯ ಶರತ್!

ಮಂಗಳೂರು:  ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದು ಈ ಸಾಧನೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹವ್ಯಾಸಿ ಈಜುಗಾರರಾದ ಎ ಚಂದ್ರಹಾಸ ಶೆಟ್ಟಿಯವರು ತಿಳಿಸಿದ್ದಾರೆ.

ಸದ್ಯ ತಮಿಳುನಾಡಿನ ಹರಿಣಿತ ಬಿ.ಎಸ್. ಇವರ ಹೆಸರಿನಲ್ಲಿ ಇರುವ 15 ನಿಮಿಷದ ಕಪೋತಾಸನದ ದಾಖಲೆಯನ್ನು ಮುರಿದು ಈ ಸಾಧಕಿ ಒಂದು ಗಂಟೆ ಎರಡು ನಿಮಿಷದ ಅವಧಿಗೆ ಸಾಧಿಸಿ ಈ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ‌

ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿರುವ ಅಂತಾರಾಷ್ಟ್ರೀಯ ಯೋಗಪಟು ಕವಿತಾ ಅಶೋಕ್ ಈಕೆಗೆ ಅತಿ ಚಿಕ್ಕ ವಯಸ್ಸಿನಿಂದಲೇ ತರಬೇತಿಯನ್ನು ಕೊಡುತ್ತಿದ್ದಾರೆ. ಇವರಿಗೆ ಬೆನ್ನೆಲುಬಾಗಿ ಸಹಕರಿಸುತ್ತಿರುವ ಶಾಲೆಯ ಪ್ರಾಂಶುಪಾಲರಾದ ಸಿಸ್ಟ‌ರ್ ಮೇಝಿ ಎ.ಸಿ., ಶಿಕ್ಷಕಿ ವಿನುತಾ ಪ್ರವೀಣ್, ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದ ವ್ಯವಸ್ಥಾಪಕರಾದ ಶ್ರೀ ರಮೇಶ್ ಬಿಜೈ ಮತ್ತು ಈಜಿನಲ್ಲಿ ಈ ಹಿಂದೆ ದಾಖಲೆ ಮಾಡಿರುವ ಚಂದ್ರಶೇಖ‌ರ್ ಸೂರಿಕುಮೇರಿ ಇವರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುವುದು ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಬಿಜೈ, ಚಂದ್ರಶೇಖ‌ರ್ ರೈ ಸೂರಿಕುಮೇರಿ ಜಾಯಿಂಟ್ ಸೆಕ್ರೆಟರಿ ಸಿಸ್ಟರ್ ಸೆಲಿನ್‌ರ, ಉಪ ಪ್ರಾಂಶುಪಾಲರಾದ ಸಿಸ್ಟರ್ ಸಂತೋಷ್ ಮೇರಿ, ಸೋನಿಯಾ ಜೆ, ಶರಣ್ಯ ಶರತ್, ಯೋಗ ಶಿಕ್ಷಕಿ ಕವಿತಾ ಅಶೋಕ್,ಹಾಗೂ ಮನೋಜ್ ಕುಮಾರ್ ರವರು ಉಪಸ್ಥಿತರಿದ್ದರು.


Spread the love