ಮಕ್ಕಳ ಹಕ್ಕುಗಳ ಸೂಕ್ಷತೆ ; ಪತ್ರಕರ್ತರಿಗೆ ಕಾರ್ಯಾಗಾರ

Spread the love

ಮಕ್ಕಳ ಹಕ್ಕುಗಳ ಸೂಕ್ಷತೆ ; ಪತ್ರಕರ್ತರಿಗೆ ಕಾರ್ಯಾಗಾರ

ಮಂಗಳೂರು : ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ದಕ್ಷಿಣ ಕನ್ನಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಾಧ್ಯಮ ಪ್ರತಿನಿಧಿಗಳೀಗೆ ಮಕ್ಕಳ ಹಕ್ಕುಗಳ ಸೂಕ್ಷ್ಮತೆ ಮತ್ತು ಮಾಧ್ಯಮ ಪ್ರತಿನಿಧಿಗಳ ಪಾತ್ರ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಾಗಾರವನ್ನು ನಗರದಲ್ಲಿ ಪತ್ರಿಕಾಭವನದಲ್ಲಿ ಆಯೋಜಿಸಲಾಗಿತ್ತು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿ ದುಲ್ಸಿನ್ ಕ್ರಾಸ್ತಾ ಅವರು ಮಾಧ್ಯಮಗಳು ಮಕ್ಕಳ ವಿಚಾರದಲ್ಲಿ ಬಹು ಮುಖ್ಯ ಪಾತ್ರವಹಿಸುತ್ತವೆ. ಮಾಧ್ಯಮಗಳು ಮಕ್ಕಳನ್ನು ಬಿಂಬಿಸುವಾಗ ಅವರ ೊಳಿತನ್ನು ಮುಂದೆ ಇಟ್ಟುಕೊಂಡು, ವೈಯುಕ್ತಿಕ ವಿಷಯಗಳಿಗೆ ಧಕ್ಕೆ ಮಾಡದಂತೆ ಅವರನ್ನು ಚಿತ್ರಿಸಬೇಕು. ಮಾಧ್ಯಮಗಳು ಸ್ವಾತಂತ್ರ್ಯ ಬಂದಾಗಿನಿಂದ ಧನಾತ್ಮಕ ಸುದ್ದಿಗಳನ್ನು ಪ್ರಕಟಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ. ಇತ್ತೀಚಿನ ವರ್ಷಗಳಲ್ಲಿ ಕಾನೂನಿನ ಸಂಘರ್ಷಕ್ಕೆ ಒಳಗಾಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದ ಇದಕ್ಕೆ ಪರಿಸರದ ಪ್ರಭಾವ ಕಾರಣವಾಗಿದ್ದು, ಮಗು ಸ್ನೇಹಿ ಪರಿಸರ ನಿರ್ಮಾಣದ ಕುರಿತು ಎಲ್ಲರೂ ಆಲೋಚನೆ ನಡೆಸಬೇಕಾಗಿದೆ.

image001child-rights-20160721-001 image002child-rights-20160721-002 image003child-rights-20160721-003 image004child-rights-20160721-004 image005child-rights-20160721-005 image006child-rights-20160721-006 image007child-rights-20160721-007 image008child-rights-20160721-008

2015ರಲ್ಲಿ ಜಾರಿಗೆ ಬಂದ ಮಕ್ಕಳ ಹಕ್ಕು ಮತ್ತು ರಕ್ಷಣೆ ಕಾನೂನಿನ ಅನ್ವಯ ಮಾಧ್ಯಮಗಳಿಗೆ ಮಕ್ಕಳ ಚಿತ್ರಗಳನ್ನು ಪ್ರಕಟಿಸುವ ಕುರಿತು ವಿವಿಧ ನಿಬಂಧನೆಗಳನ್ನು ಹೇರಿದೆ. ಮಗುವಿನ ಚಿತ್ರವನ್ನು ಮಾಧ್ಯಮಗಳಲ್ಲಿ ತೋರಿಸುವ ಮುನ್ನ ಲಿಖಿತ ಪರವಾನಿಗೆಯ ಮೂಲಕ ಅನುಮತಿಯನ್ನು ಪಡೆಯಬೇಕಾಗಿದೆ. ಪರಿವಾನಿಗೆ ಹೊಂದಿದರೂ ಕೂಡ ಮಗುವಿನ ಮುಖದ ಚರ್ಯೆಯನ್ನು ಯಾವುದೇ ರೀತಿಯಲ್ಲಿ ತೋರಿಸಲು ಅವಕಾಶವಿಲ್ಲ ಇದರಿಂದ ಮಗುವಿನ ಮುಂದಿನ ಭವಿಷ್ಯಕ್ಕೆ ಮಾರಕವಾಗಬಲ್ಲದು. ಈ ಕಾನೂನು ಮೀರಿದರೆ ಕಠಿಣ ಶಿಕ್ಷೆಗೆ ಗುರಿಯಾಗುವ ಅವಕಾಶ ಕೂಡ ಇದ್ದು, ಆರು ತಿಂಗಳು ಜೈಲು ವಾಸ ಹಾಗೂ 2 ಲಕ್ಷ ರೂ ದಂಡವನ್ನು ಕೂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾ ಅಧ್ಯಕ್ಷ ನಿಕೇಶ್ ಶೆಟ್ಟಿ ಮಾತನಾಡಿ ಬಾಲ ನ್ಯಾಯ ಕಾಯ್ದೆ ಪ್ರಕಾರ ಪ್ರತಿ ಮಗುವು ಗೌಪ್ಯತೆ ಹಾಗೂ ಖಾಸಗಿತನ ಕಾಯ್ದುಕೊಳ್ಳುವ ಹಕ್ಕು ಹೊಂದಿದ್ದು, ಸಾರ್ವಜನಿಕ ವಲಯದಲ್ಲಿ ತಿಳುವಳೀಕೆ ಕೊರತೆಯ ಕಾರಣದಿಂದ ಈ ಬಗ್ಗೆ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಯಾವುದೇ ದೂರುಗಳು ದಾಖಲಾಗುತ್ತಿಲ್ಲ. ನ್ಯಾಯದಾನ ವಿಷಯದಲ್ಲಿ ಕಾನೂನು ಹೊರತುಪಡಿಸಿ ಯಾವ ವ್ಯವಸ್ಥೆಯು ಸುಪ್ರಿಂ ಅಲ್ಲ. ಮಕ್ಕಳ  ಕಲ್ಯಾಣ ಸಮಿತಿಯ ತೀರ್ಮಾನವನ್ನು ಕೂಡ ಸೆಷನ್ಸ್ ಕೋರ್ಟಿನಲ್ಲಿ ಪ್ರಶ್ನಿಸಲು ಅವಕಾಶವಿದ್ದು, ಮಾಧ್ಯಮ ಕೂಡ ಇದರಿಂದ ಹೊರತಲ್ಲ ಎಂದರು.

ಜೆಜೆ ಬೋರ್ಡ್ ಸದಸ್ಯ ರೆನ್ನಿ ಡಿ’ಸೋಜಾ, ಪ್ರೆಸ್ ಕ್ಲಬ್ ಅಧ್ಯಕ್ಷ ರೋನಾಲ್ಡ್ ಅನಿಲ್ ಫೆರ್ನಾಂಡಿಸ್, ಮಕ್ಕಳ ರಕ್ಷಣ ಅಧಿಕಾರಿ ಉಸ್ಮಾನ್ ಇನ್ನಿತರರು ಉಪಸ್ಥಿತರಿದ್ದರು.


Spread the love