ಮಣಿಪಾಲ ಪೊಲೀಸರಿಂದ ರೂ 10 ಲಕ್ಷ ಮೌಲ್ಯದ ಎಂ.ಡಿ.ಎಂ.ಎ ಡ್ರಗ್ಸ್ ವಶ; ಓರ್ವನ ಬಂಧನ

Spread the love

ಮಣಿಪಾಲ ಪೊಲೀಸರಿಂದ ರೂ 10 ಲಕ್ಷ ಮೌಲ್ಯದ ಎಂ.ಡಿ.ಎಂ.ಎ ಡ್ರಗ್ಸ್ ವಶ; ಓರ್ವನ ಬಂಧನ

ಉಡುಪಿ: ಡ್ರಗ್ಸ್ ಜಾಲದ ವಿರುದ್ದ ತನಿಖೆ ಚುರುಕುಗೊಳಿಸಿರುವ ರಾಜ್ಯ ಪೊಲೀಸರು ಆಂತರಿಕ ಭದ್ರತಾ ವಿಭಾಗದ ಸೂಚನೆಯಂತೆ ಮಣಿಪಾಲ ಪೊಲೀಸರು ಸುಮಾರು ಹತ್ತು ಲಕ್ಷ ಮೌಲ್ಯದ ಎಂ.ಡಿ.ಎಂ. ಎ ಮಾತ್ರೆಗಳನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.

ಬಂಧಿತ ಯುವಕನನ್ನು ಉತ್ತರ ಭಾರತ ಮೂಲದ ಯುವಾಂಶು ಜೋಶಿ(20) ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮೂಲಗಳ ಪ್ರಕಾರ ಮಣಿಪಾಲ ಪೊಲೀಸರು ಬಂಧಿತ ವ್ಯಕ್ತಿಯಿಂದ ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಎಂ.ಡಿ.ಎಂ. ಎ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


Spread the love