ಮನನೊಂದು ಮೆಡಿಕಲ್ ಶಾಪ್ ಮ್ಹಾಲಕ ಆತ್ಮಹತ್ಯೆ

Spread the love

ಮನನೊಂದು ಮೆಡಿಕಲ್ ಶಾಪ್ ಮ್ಹಾಲಕ ಆತ್ಮಹತ್ಯೆ

ಮಂಗಳೂರು:ಮೆಡಿಕಲ್ ಶಾಪಿನ ಮಾಲಕರೋರ್ವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸಂಭವಿಸಿದೆ.

ಮೃತರನ್ನು ಮಂಗಳೂರು ನಿವಾಸಿ ಅರ್ನೆಸ್ಟ್ ಎವರೆಸ್ಟ್ ರೊಡ್ರಿಗಸ್ (57) ಎಂದು ಗುರುತಿಸಲಾಗಿದೆ. ಮೃತರು ನಗರದ ಹಂಪನಕಟ್ಟೆ ಮಿಲಾಗ್ರಿಸ್ ಸಂಕೀರ್ಣದಲ್ಲಿ ಮೆಡಿಕಲ್ ಶಾಪನ್ನು ನಡೆಸುತ್ತಿದ್ದರು ಎನ್ನಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಮಾಹಿತಿಗಳ ಪ್ರಕಾರ ಮೆಡಿಕಲ್ ಶಾಪಿನಲ್ಲಿ ಸರಿಯಾದ ವ್ಯಾಪಾರ ಇಲ್ಲವಾಗಿದ್ದು ಈ ನಡುವೆ ವಾಣಿಜ್ಯ ಸಂಕಿರ್ಣದ ಆಡಳಿತ ಮಂಡಳಿ ಅಂಗಡಿಯ ಬಾಡಿಗೆ ಕೂಡ ಹೆಚ್ಚಿಸಲಾಗಿದ್ದು ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೃತರು ಪತ್ನಿ ನೀನಾ, ಮಕ್ಕಳಾದ ಈಯಾನ್, ನಿಶಾನ್ ಮತ್ತು ಈಥನ್ ಅವರನ್ನು ಅಗಲಿದ್ದಾರೆ.


Spread the love