ಮಲ್ಪೆ: ದ್ವಿತೀಯ ಪಿಯುಸಿ ವಿದ್ಯಾರ್ಥಿ ‘ಬೆಲ್ಟ್’ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ

Spread the love

ಮಲ್ಪೆ: ದ್ವಿತೀಯ ಪಿಯುಸಿ ವಿದ್ಯಾರ್ಥಿ ‘ಬೆಲ್ಟ್’ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮಲ್ಪೆ: ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಬೆಲ್ಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನೇಜಾರು ಸಮೀಪದ ಕೆಳಾರ್ಕಳಬೆಟ್ಟು ಎಂಬಲ್ಲಿ ಸಂಭವಿಸಿದೆ.

ಮೃತ ವಿದ್ಯಾರ್ಥಿಯನ್ನು ಕೆಳಾರ್ಕಳಬೆಟ್ಟು ನಿವಾಸಿ ಜಯಂತಿ ಎಸ್ ಅವರ ಮಗ ಸ್ವಸ್ತಿಕ್ (16) ಎಂದು ಗುರುತಿಸಲಾಗಿದೆ.

ಜಯಂತಿ ಅವರ ಪುತ್ರ ಸ್ವಸ್ತಿಕ್ ಅವರು ಉಡುಪಿಯ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಜುಲೈ 27ರಂದು ಜಯಂತಿಯವರು ಗಂಟೆಗೆ ತನ್ನ ಮಗಳ ಮೆಡಿಕಲ್ ಸರ್ಟಿಫಿಕಟ್ ತರಲು ನೇಜಾರಿಗೆ ಹೋಗಿ ವಾಪಾಸ್ಸು ಮನೆಗೆ ಬಂದಾಗ ಮನೆಯ ಎದುರು ಬಾಗಿಲು ತೆರೆದಿದ್ದು ಸ್ವಸ್ತಿಕ್ ಮನೆಯ ಹಾಲ್ ನ ಉತ್ತರ ಬದಿಯ ಕಿಟಕಿಗೆ ನೇಣು ಹಾಕಿಕೊಂಡು ಸೋಫಾದ ಮೇಲೆ ಒರಗಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು ಕೂಡಲೆ ಸ್ವಸ್ತಿಕ್ ನ ಕುತ್ತಿಗೆಯಲ್ಲಿದ್ದ ಬೆಲ್ಟ್ ಅನ್ನು ಕಟ್ ಮಾಡಿ ನೆರೆಮನೆಯವರ ಸಹಾಯದಿಂದ ಕಾರಿನಲ್ಲಿ ಗೆರೊಟ್ಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರ ಸಲಹೆ ಮೇರೆಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಸ್ವಸ್ತಿಕ್ ಈತನು ಈಗಾಗಲೆ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಯಾವುದೋ ಕಾರಣದಿಂದ ಮನೆಯಲ್ಲಿನ ಕಿಟಕಿಗೆ ಬೆಲ್ಟ್ ಕಟ್ಟಿ ಅದರಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Subscribe
Notify of

0 Comments
Inline Feedbacks
View all comments