ಮಾಜಿ ಡಾನ್ ‘ಎಕ್ಕೂರು ಬಾಬಾ’ ನಿಧನ

Spread the love

ಮಾಜಿ ಡಾನ್ ‘ಎಕ್ಕೂರು ಬಾಬಾ’ ನಿಧನ

ಮಂಗಳೂರು: ಮಾಜಿ ಡಾನ್ ಹಿನ್ನೆಲೆಯ ‘ಎಕ್ಕೂರು ಬಾಬಾ’ ಎಂದೇ ಹೆಸರುವಾಸಿಯಾದ ಶುಭಕರ ಶೆಟ್ಟಿ (61) ನಗರದ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಸಂಜೆ ನಿಧನರಾದರು

ಮಧುಮೇಹ ಸಹಿತ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ಎಕ್ಕೂರು ಬಾಬಾ, ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಸಂಜೆ ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ.

ಕೆಲವು ದಿನಗಳ ಹಿಂದೆ ಎಕ್ಕೂರು ಬಾಬಾ ಅವರ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು ಬಳಿಕ ಎಕ್ಕೂರು ಬಾಬಾ ಅವರು ತಮ್ಮ ದೈನಂದಿನ ಆರೋಗ್ಯ ತಪಾಸಣೆ ಮಾಡಿಕೊಂಡಾಗ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಶುಕ್ರವಾರ ಸಂಜೆ ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ


Spread the love