ಮಾ.25ರಂದು ವಿಧಾನಸೌಧದ ಮುಖ್ಯ ಪ್ರವೇಶ ದ್ವಾರ ಉದ್ಘಾಟನೆ : ಯು.ಟಿ.ಖಾದ‌ರ್

Spread the love

ಮಾ.25ರಂದು ವಿಧಾನಸೌಧದ ಮುಖ್ಯ ಪ್ರವೇಶ ದ್ವಾರ ಉದ್ಘಾಟನೆ : ಯು.ಟಿ.ಖಾದ‌ರ್

ಮಂಗಳೂರು: ವಿಧಾನಸೌಧದ ಮುಖ್ಯ ದ್ವಾರವನ್ನು ಮಾರ್ಚ್ 25 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದ‌ರ್ ತಿಳಿಸಿದ್ದಾರೆ

ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಪ್ರವೇಶ ದ್ವಾರವು ಅತ್ಯಂತ ಸುಂದರವಾದ ಕೆತ್ತನೆಗಳೊಂದಿಗೆ ಕರ್ನಾಟಕ ಶೈಲಿಯನ್ನು ಹೊಂದಿದ್ದು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಮತ್ತು ಲೋಕೋಪಯೋಗಿ ಇಲಾಖೆ ಮೂಲಕ ಅಭಿವೃದ್ಧಿಪಡಿಸಲಾಗಿದೆ ಎಂದರು.

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಬಳಿ ಮತ್ತು ಹೈಕೋರ್ಟ್ ಕಡೆಯಿಂದ ಪ್ರವೇಶ ದ್ವಾರಗಳನ್ನು ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ವಿಧಾನಸೌಧಕ್ಕೆ ಭಾಗಶಃ ವಿದ್ಯುತ್‌ ಪೂರೈಸುವ ಸೌರ ಫಲಕಗಳನ್ನು (ಸೋಲಾರ್ ಪ್ಯಾನೆಲ್) ಸಹ ಮಾರ್ಚ್ 25 ರಂದು ಉದ್ಘಾಟಿಸಲಾಗುವುದು ಎಂದು ಹೇಳಿದರು.

ವಿಧಾನಸೌಧದ ಆವರಣದಲ್ಲಿರುವ ಬೀದಿ ನಾಯಿಗಳಿಗೆ ಶ್ವಾನ ಆಶ್ರಯ ತಾಣ ನಿರ್ಮಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಭಾಪತಿಯವರು, ನಾವು ನಮ್ಮ ಅಭಿಪ್ರಾಯ ಮತ್ತು ಯೋಜನೆಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಈ ಬಗ್ಗೆ ಸರ್ಕಾರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.


Spread the love