ಮೀನುಗಾರಿಕಾ ರಜೆ ಮುಂದಿನ ವರ್ಷದಿಂದ 3 ತಿಂಗಳು? ಏಕರೂಪದ ರಜಾ ನಿಯಮ: ಪಶ್ಚಿಮ ರಾಜ್ಯದಲ್ಲಿ ಅನುಷ್ಠಾನ ಸಾಧ್ಯತೆ

Spread the love

ಮೀನುಗಾರಿಕಾ ರಜೆ ಮುಂದಿನ ವರ್ಷದಿಂದ 3 ತಿಂಗಳು? ಏಕರೂಪದ ರಜಾ ನಿಯಮ: ಪಶ್ಚಿಮ ರಾಜ್ಯದಲ್ಲಿ ಅನುಷ್ಠಾನ ಸಾಧ್ಯತೆ

ಮಂಗಳೂರು: ಒಂದು ದೇಶ-ಒಂದು ಚುನಾವಣೆ”, “ಒಂದು ದೇಶ-ಒಂದು ಪಿಂಚಣಿ ಎಂಬಂತೆ “ಒಂದು ದೇಶ-ಒಂದೇ ಅವಧಿಯ ಮೀನುಗಾರಿಗೆ ಎಂಬ ನಿಯಮ ಮುಂದಿನ ವರ್ಷದ ಮೀನಗಾರಿಕಾ ಋತುವಿನಿಂದ ಪಶ್ಚಿಮ ಕರಾವಳಿಯಲ್ಲಿ ಅನುಷ್ಠಾನಗೊಳ್ಳುವ ಸಾಧ್ಯತೆ

ಪ್ರಸ್ತುತ ಜೂನ್ ಹಾಗೂ ಜುಲೈ ಸೇರಿ 2 ತಿಂಗಳು ಮೀನುಗಾರಿಕೆ ನಿಷೇಧವಿದ್ದು, ಒಂದು ವೇಳೆ ಏಕರೂಪದ ಮೀನುಗಾರಿಕೆ ನಿಯಮ ಜಾರಿಯಾದರೆ ಜೂನ್, ಜುಲೈ ಹಾಗೂ ಆಗಸ್ಟ್‌ನಲ್ಲಿಯೂ ಮೀನುಗಾರಿಕೆಗೆ ನಿಶೇಧ ವಿರುತ್ತದೆ . ಅಥವಾ ಜೂನ್ , ಜೂಲೈ ಹಾಗೂ ಆಗಸ್ಟ್‌ನಲ್ಲಿ 15 ದಿನ ನಿಷೇಧ ನಿಯಮ ಜಾರಿಯಾಗುವ ಸಾಧ್ಯತೆಯೂ ಇದೆ.

ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ನಿಷೇಧದ ಅವಧಿ ವಿಸ್ತರಣೆ ಬಗ್ಗೆ ಅಧ್ಯಯನ ನಡೆಸಿ ಮುಂದಿನ ಕ್ರಮಗಳನ್ನು ಶಿಫಾರಸು ಮಾಡಲು ಕೇಂದ್ರ ಮೀಮಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ತಾಂತ್ರಿಕ ಸಮಿತಿ ರಚಿಸಿದೆ. ದೇಶದಲ್ಲಿ ಏಕರೂಪದ ವಿಷೇಧದ ಅವಧಿ ಬಗ್ಗೆ ವಿವಿಧ ರಾಜ್ಯದ ಮೀನುಗಾರರ ಜತೆ ಸಮಿತಿಯು ಸಮಾಲೋಚಿಸುತ್ತಿದೆ.

“ಮೀನು ತಳಿ ಅಳಿವಿನಂಚಿನಲ್ಲಿದೆ, ಕಡಲಲ್ಲಿ ಮೀನು ಸಿಗುತ್ತಿಲ್ಲ’ ಎಂಬ ಆತಂಕ ಇತ್ತೀಚೆಗೆ ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ, ಗುಜರಾತ್, ತಮಿಳುನಾಡುವಿನಲ್ಲಿ ಏಕರೂಪದ ವೇಳಾಪಟ್ಟಿಯ ಮೀನುಗಾರಿಕೆ ವಿಷಯವು ಚರ್ಚೆಯಲ್ಲಿದೆ. ಮೀಮ ಸಂತಾನೋತ್ಪತ್ತಿ ಕಾಲದಲ್ಲಿ (ಮುಂಗಾರಿನ 3 ತಿಂಗಳು) ಯಾಂತ್ರಿಕ ಬೋಟ್‌ಗಳು ಕಡಲಿಗಿಳಿಯದಿದ್ದರೆಬಳಿಕ ಮತ್ಸÂ ಸಂಪತ್ತು ಹೇರಳವಾಗಿ ಸಿಗಲಿದೆ ಎಂಬುದು ಲೆಕ್ಕಾಚಾರ. ಸಹಮತ ಸೂಚಿಸಿದ್ದು, ಆದರೆ, ಇದನ್ನು ಇತರ ರಾಜ್ಯದವರು ಪಾಲಿಸಿದರೆ ಮಾತ್ರ ನಾವು ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಪ್ರಸಕ್ತ 61 ದಿನಗಳ ನಿಷೇಧ ಅವಧಿ ದೇಶದಲ್ಲಿ ಜಾರಿಯಲ್ಲಿದ್ದು, ನಿಷೇಧದ ಅವಧಿ ವಿಸ್ತರಣೆಗೆ ಗುಜರಾತ್ ಸಮಿತಿ ಮುಂದೆ ಒಪ್ಪಿಗೆ ಸೂಚಿಸಿದೆ. ಕರ್ನಾಟಕವೂ ನಿಷೇಧ ಸಕಾರಾತ್ಮಕವಾಗಿದೆ. ಉಳಿದಂತೆ ಎಲ್ಲಾ ರಾಜ್ಯಗಳ ಅಭಿಪ್ರಾಯವನ್ನು ಪಡೆದು ಡಿಸೆಂಬರ್ ಅಥವಾ ಜನವರಿ ವೇಳೆಗೆ ಕೇಂದ್ರಕ್ಕೆ ವರದಿ ಸಲ್ಲಿಸುವ ನಿರೀಕ್ಷೆ ಇದೆ. ತಾಂತ್ರಿಕ ಸಮಿತಿಯ ಅಧ್ಯಕ್ಷ ಡಾ|ಗ್ರೀನ್‌ಸನ್ ಜಾರ್ಜ್ ಇತ್ತೀಚೆಗೆ ಮಂಗಳೂರಿಗೆ ಆಗಮಿಸಿ ಮೀನುಗಾರರ ಜತೆಗೆ ಚರ್ಚೆನಡೆಸಿದ್ದರು.

ಪಶ್ಚಿಮ ಕರಾವಳಿಯಲ್ಲಿ ಸುಮಾರು 20 ವರ್ಷದ ಹಿಂದೆ 90 ದಿನದ ಮೀನುಗಾರಿಕೆ ನಿಷೇಧವಿತ್ತು. ಇದನ್ನು ಕರ್ನಾಟಕ ರಾಜ್ಯದ ಮೀನುಗಾರರು ಪಾಲಿಸುತ್ತಿದ್ದರು. ಆದರೆ, ನೆರೆರಾಜ್ಯದವರು 2 ತಿಂಗಳಾದ ಬಳಿಕ ಮೀನುಗಾರಿಕೆ ನಡೆಸುತ್ತಿದ್ದರು. ಹೀಗಾಗಿ ಅವಧಿಯನ್ನು ಏಕರೂಪಕ್ಕೆ ತರುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ ಪರಿಣಾಮ 57 ದಿನ (ಜೂ. 15ರಿಂದ ಆ.10) ಮೀನುಗಾರಿಕೆ ನಿಷೇಧವಿತ್ತು. ಇದೂ ಕೂಡ ಪರಿಣಾಮಕಾರಿಯಾಗದೆ 10 ವರ್ಷದಿಂದ ಪಶ್ಚಿಮ ಕರಾವಳಿಗೆ ಏಕರೂಪದಲ್ಲಿ 61 ದಿನ (ಜೂ.1ರಿಂದ ಜು.31)ಮೀನುಗಾರಿಕೆ ನಿಷೇಧವಿದೆ.

ಮೀನುಗಳು ಸಂತಾನೋತ್ಪತ್ತಿ ಮಾಡುವ ಅವಧಿ ಮಳೆಗಾಲ, ಜೂನ್, ಜುಲೈ, ಆಗಸ್ಟ್ ವೇಳೆಗೆ ಮೀನು ಮರಿ ಇಡುವ ಸಮಯ. ಇಂತಹ ಸಂದರ್ಭದಲ್ಲಿ ಯಾಂತ್ರಿಕ ದೋಣಿಗಳು ನೀರಿಗೆ ಇಳಿದರೆ ಸಣ್ಣ ಮೀನುಗಳೇ ಬಲೆಗೆ ಬೀಳುತ್ತವೆ. ಇದರಿಂದ ಭವಿಷ್ಯದ ಮೀನುಗಾರಿಕೆಗೆ ದೊಡ್ಡ ನಷ್ಟ. ಇದರಿಂದ ಮತ್ಸÂಸಂಕುಲಕ್ಕೆ ಹೊಡೆತ ಬೀಳಲಿದ್ದು, ಭವಿಷ್ಯದಲ್ಲಿ ಮೀನುಗಾರರಿಗೆ ತೊಂದರೆ ಉಂಟಾಗಲಿದೆ. ಈ ಕಾರಣದಿಂದ ಮಳೆಗಾಲದಲ್ಲಿ ಮೀಮಗಾರಿಕೆ ನಿಷೇಧವಿದೆ. ಜತೆಗೆ, ಮುಂಗಾರು ಸಮಯದಲ್ಲಿ ವಿಪರೀತ ಗಾಳಿ ಮಳೆ ಇರುವುದರಿಂದ ಕಡಲಲ್ಲಿ ಹವಾಮಾನ ವ್ಯತ್ಯಯವುಂಟಾಗಿ ಮೀನುಗಾರರಿಗೆ ಸಮಸ್ಯೆ ಆಗುತ್ತದೆ


Spread the love
Subscribe
Notify of

0 Comments
Inline Feedbacks
View all comments