ಮುಂಬೈ ನಿಂದ ಬಂದ ಇಬ್ಬರು ಬಾಲಕಿಯರು ಸಹಿತ ಉಡುಪಿಯಲ್ಲಿ ಆರು ಮಂದಿಗೆ ಕೊರೋನಾ ಪಾಸಿಟಿವ್

Spread the love

ಮುಂಬೈ ನಿಂದ ಬಂದ ಇಬ್ಬರು ಬಾಲಕಿಯರು ಸಹಿತ ಉಡುಪಿಯಲ್ಲಿ ಆರು ಮಂದಿಗೆ ಕೊರೋನಾ ಪಾಸಿಟಿವ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬುಧವಾರ ಆರು ಜನರಲ್ಲಿ ಕೋವಿಡ್ -19 ಸೋಂಕು ದೃಢಗೊಂಡಿದೆ.

ರಾಜ್ಯದಿಂದ ಬಿಡುಗಡೆಯಾಗಿರುವ ಹೆಲ್ತ್ ಬುಲೆಟಿನ್ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಆರು ಮಂದಿಯಲ್ಲಿ ಕೋವಿಡ್ -19 ದೃಢಗೊಂಡಿದೆ ಎಂದು ತಿಳಿಸಲಾಗಿದೆ.

ಮಾಹಿತಿಗಳ ಪ್ರಕಾರ ಬೈಂದೂರು ತಾಲೂಕಿನಲ್ಲಿ ಕ್ವಾರಂಟೈನ್ ಇರುವ 74 ವರ್ಷ ಹಾಗೂ 55 ವರ್ಷದ ಗಂಡಸು, ಕುಂದಾಪುರ ಕ್ವಾರಂಟೈನ್ ಸೆಂಟರ್ ನಲ್ಲಿ ಇರುವ 15 ಮತ್ತು 4 ವರ್ಷದ ಬಾಲಕಿ ಮತ್ತು ಹೆಬ್ರಿಯಲ್ಲಿ ಕ್ವಾರಂಟೈನ್ ಕೇಂದ್ರಲ್ಲಿ ಇರುವ 31 ವರ್ಷ ಹಾಗೂ 47 ವರ್ಷದ ಮಹಿಳೆಯರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಆರು ಮಂದಿಯೂ ಕೂಡ ಮುಂಬೈನಿಂದ ಬಂದಿದ್ದು ಕ್ವಾರಂಟೈನ್ ಕೇಂದ್ರದಲ್ಲಿದ್ದರು ಎಂಬ ಮಾಹಿತಿ ಲಭಿಸಿದೆ.

ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 21 ಕ್ಕೇರಿದೆ. ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಈಗಾಗಲೇ 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದು , ಓರ್ವ ಕೊರೋನ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದರು.


Spread the love