ಮುಲ್ಕಿ ಪೊಲೀಸರ ಕಾರ್ಯಾಚರಣೆ ಹಲವು ಕಳ್ಳತನ ಪ್ರಕರಣಗಳು ಪತ್ತೆ

Spread the love

ಮುಲ್ಕಿ ಪೊಲೀಸರ ಕಾರ್ಯಾಚರಣೆ ಹಲವು ಕಳ್ಳತನ ಪ್ರಕರಣಗಳು ಪತ್ತೆ

ಮುಲ್ಕಿ: ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಇಬ್ಬರು ಬಾಲಕರನ್ನು ಮೂಲ್ಕಿ ಠಾಣಾ ಪೋಲಿಸರು ಬಂಧಿಸಿದ್ದಾರೆ.

ಮುಲ್ಕಿ ಠಾಣಾ ವ್ಯಾಪ್ತಿಯ ಕೋಲ್ನಾಡ್ ಇಂಡಸ್ಟ್ರೀಯಲ್ ರಸ್ತೆಯ ಬಳೀ ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಲಿಂಗಪ್ಪಯ್ಯ ಕಾಡು ಪರಿಸರದ ಹಳೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಬಾಲಕರನ್ನು ಪೋಲಿಸರು ವಶಪಡಿಸಿಕೊಂಡಿದ್ದು ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ 2016ರಿಂದ ಇಲ್ಲಿಯವರೆಗೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ.

ಲಿಂಗಪ್ಪಯ್ಯ ಕಾಡು ಬಳಿ ಕಳ್ಳತನ ಮಾಡಿದ ಬಜಾಜ್ ಡಿಸ್ಕವರ್ ಬೈಕ್, ಕಾರ್ನಾಡು ಗ್ರಾಮದ ದರ್ಗಾ ರೋಡ್ ಬಳಿ ಹೀರೊ ಹೊಂಡಾ ಪ್ಯಾಶನ್ ಪ್ರೋ ಬೈಕ್, ಕ್ರಮ್ರಾಲ್ ಗ್ರಾಮಪಂಚಾಯತ್ ಕಸ ವಿಲೇವಾರಿ ವಾಹನದ ಬ್ಯಾಟರಿ, ಕಿನ್ನಿಗೋಳಿ ಬಳಿ ಸುಜುಕಿ ಸುಮುರಾಯ್ ಬೈಕ್, ಕಿಲ್ಪಾಡಿ ಗ್ರಾಮ ಗೇರುಕಟ್ಟೆ ಬಳಿ ಹಾಲಿನ ಬೂತಿನಲ್ಲಿ ನಗದು ಹಾಗೂ ಸಿಗರೇಟು ಕಳವು, ಮೊಬೈಲ್ ಪೋನ್ ಕಳವು ಹಾಗೂ ಇದಲ್ಲದೆ ವಿವಿಧ ಕಡೆಗಳಲ್ಲಿ ಅಂಗಡಿ ಕಳವು ಹಾಗೂ ನಿಲ್ಲಿಸಿದ ವಾಹನಗಳಿಂದ ಪೆಟ್ರೋಲ್ ಹಾಗೂ ಬ್ಯಾಟರಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುತ್ತಾರೆ.

ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಕಳ್ಳತನ ನಡೆಸುತ್ತಿದ್ದ ೀ ಬಾಲಕರು ಹಿಂದೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ. ಒಟ್ಟು ಸುಮಾರು ಒಂದು ಲಕ್ಷ ಮೌಲ್ಯದ ಕಳ್ಳತನದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.


Spread the love