ಮುಲ್ಕಿ: ಬೆಳ್ಳಾಯರು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ-ಸಿಸಿ ಕ್ಯಾಮೆರಾ ಮೂಲಕ ಕಳ್ಳನ ಪತ್ತೆ

Spread the love

ಮುಲ್ಕಿ: ಬೆಳ್ಳಾಯರು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ-ಸಿಸಿ ಕ್ಯಾಮೆರಾ ಮೂಲಕ ಕಳ್ಳನ ಪತ್ತೆ

ಮುಲ್ಕಿ: ಸೀಮೆಯ ಬೆಳ್ಳಾಯರು ಕೋಲ್ನಾಡು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಮಂಗಳವಾರ ಮಧ್ಯರಾತ್ರಿ ವೇಳೆಗೆ ಯುವಕನೊಬ್ಬ ಕಳ್ಳತನಕ್ಕೆ ಯತ್ನಿಸಿದ್ದು , ಸಿಸಿ ಕ್ಯಾಮೆರಾ ಸಹಾಯದಿಂದ ಆರೋಪಿ ಕಳ್ಳನನ್ನು ಮುಲ್ಕಿ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಬಂಧಿಸಿದ್ದಾರೆ.

ಆರೋಪಿಯನ್ನು ಮಡಿಕೇರಿ ವಿರಾಜಪೇಟೆ ನಿವಾಸಿ ರವಿ (28) ಎಂದು ಗುರುತಿಸಲಾಗಿದೆ

ಆರೋಪಿ ರವಿ ಮಂಗಳವಾರ ಮಧ್ಯರಾತ್ರಿ 11:30 ಬಳಿಕ ದೇವಸ್ಥಾನದ ಎದುರು ಎದುರು ಭಾಗದಲ್ಲಿ ಹಗ್ಗದ ಸಹಾಯದಿಂದ ಮೇಲೆ ಹತ್ತಿ ಬಳಿಕ ಮೇಲ್ಭಾಗದ ಕಬ್ಬಿಣದ ಜಾಲಿಯನ್ನು ತುಂಡರಿಸಿ ದೇವಸ್ಥಾನದ ಒಳಗಡೆ ಪ್ರವೇಶಿಸಿದ್ದಾನೆ. ದೇವಸ್ಥಾನದ ಒಳಭಾಗದಲ್ಲಿರುವ ಕಾಣಿಕೆ ಡಬ್ಬಿಯನ್ನು ಜಾಲಾಡಿ ಬಳಿಕ ಅಳವಡಿಸಿರುವ ಸಿ ಸಿ ಕ್ಯಾಮರಾಗೆ ಹಾನಿ ಮಾಡಲು ಯತ್ನಿಸಿದ್ದಾನೆ.

ಈ ಸಂದರ್ಭ ಸಿಸಿ ಕ್ಯಾಮೆರಾ ಅಳವಡಿಸಿರುವ ಕುಂದಾಪುರ ಮೂಲದ “ಸೈನ್ ಇನ್ ಸೆಕ್ಯೂರಿಟಿ”ಕಂಪನಿಯವರಿಗೆ ಮಾಹಿತಿ ಬಂದಿದ್ದು ದೇವಸ್ಥಾನದ ಆಡಳಿತ ಮಂಡಳಿಗೆ ಹಾಗೂ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ

ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ಮುಲ್ಕಿ ಪೊಲೀಸ್ ಠಾಣೆಯ ಎಸ್ ಐ ರಾಘವೇಂದ್ರ ನಾಯಕ್ ಮತ್ತು ಸಿಬ್ಬಂದಿ ದೇವಸ್ಥಾನಕ್ಕೆ ಧಾವಿಸಿ ಸುತ್ತುವರಿದಿದ್ದಾರೆ

ಇತ್ತ ಕಳ್ಳತನ ನಡೆಸಿದ ವ್ಯಕ್ತಿ ರವಿ ಸ್ಥಳದಿಂದ ಪರಾರಿಯಾಗಿ ಯತ್ನಿಸಿ, ದೇವಸ್ಥಾನದ ಒಳಭಾಗದ ಸುಬ್ರಹ್ಮಣ್ಯ ಗುಡಿ ಒಳಗೆ ಅಡಗಿ ಕುಳಿತುಕೊಂಡಿದ್ದಾನೆ.

ಕೂಡಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ

ಆರೋಪಿ ರವಿ ಈ ಹಿಂದೆ ಗಂಧ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಸೆರೆಮನೆ ವಾಸ ಅನುಭವಿಸಿದ್ದ ಹಾಗೂ ರಾತ್ರಿ 10ಗಂಟೆಗೆ ದೇವಸ್ಥಾನಕ್ಕೆ ಬಂದು ಪರಿಶೀಲಿಸಿ ಹೋಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಕ್ಕೆ ಉತ್ತರ ನೀಡಿದ್ದಾನೆ

ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

ಆರೋಪಿ ರವಿ ದೇವಸ್ಥಾನದ ಒಳಭಾಗದಲ್ಲಿ ಕಳ್ಳತನ ಮಾಡಲು ಹಗ್ಗದಿಂದ ಇಳಿಯುವ ದೃಶ್ಯ ಹಾಗೂ ಸಿಸಿ ಕ್ಯಾಮೆರಾ ಗೆ ಹಾನಿ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೇವಸ್ಥಾನದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಭಾರೀ ಕಳ್ಳತನಕ್ಕೆ ಬ್ರೇಕ್ ಬಿದ್ದಿದೆ


Spread the love