ಮೂಡಬಿದರೆ : ತಂದೆಯನ್ನು ಕೊಂದ ಪುತ್ರನ ಬಂಧನ

Spread the love

ಮೂಡಬಿದರೆ : ತಂದೆಯನ್ನು ಕೊಂದ ಪುತ್ರನ ಬಂಧನ

ಮೂಡಬಿದರೆ: ಮೂಡಬಿದರೆ ಸಮೀಪ ಹೊಸಬೆಟ್ಟು ಎಂಬಲ್ಲಿ ವೃದ್ಧ ತಂದೆ ಪೌಲ್ ಗೋವಿಯಸ್ ಎಂಬರನ್ನು ಕೊಂದ ಅವರ ಪುತ್ರ ಸ್ಟ್ಯಾನಿ ಗೋವಿಯಸ್ ರ ಕೊಲೆಗೆ ಯತ್ನಿಸಿದ ಆರೋಪಿ ಡಾಲ್ಫಿ ಗೋವಿಯಸ್ ಎಂಬಾತನನ್ನು ಬಂಧೀಸಲಾಗಿದೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ನಗರ ಕಮೀಷನರ್ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಎ 14 ರಂದ ರಾತ್ರಿ ಈ ಕೊಲೆ ನಡೆದಿದೆ.ಕೊಲೆ ಮತ್ತು ಕೊಲೆ ಯತ್ನ ಆರೋಪ ಎದುರಿಸುತ್ತಿರುವ ಡಾಲ್ಫಿ ಗೋವಿಯಸ್ ಕೊಲೆಯಾದ ಪೌಲ್ ಗೋವಿಯಸ್ ಅವರ ಪುತ್ರನಾಗಿದ್ದಾನೆ. ಮಾರಣಾಂತಿಕ ಹಲ್ಲೆಗೊಳಗಾದ ಸ್ಟ್ಯಾನಿ ಗೋವಿಯಸ್ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎ14 ರಂದು ಸ್ಥಳಿಯ ಚರ್ಚಿನಲ್ಲಿ ಪೂಜಾ ಕಾರ್ಯಕ್ರಮವಿದ್ದ ಕಾರಣ ತನ್ನ ತಂದೆ ಪೌಲ್ ಗೋವಿಯಸ್ ಅವರನ್ನು ಹಿರಿಯ ಪುತ್ರ ಸ್ಟ್ಯಾನಿ ಗೊವಿಯಸ್ ಮನೆಯಲ್ಲಿ ಬಿಟ್ಟು ಹೊರಗಿನಿಂದ ಬೀಗ ಹಾಕಿ ಹೋಗಿದ್ದರು. ಈ ಸಂದರ್ಬ ಒಳಗೆ ನುಗ್ಗಿದ ಡಾಲ್ಫಿ ಗೋವಿಯಸ್ ತಂದೆಯ ಕಪಾಳಕ್ಕೆ ಹೊಡೆದು ಗೊಡೆಗೆ ತಲೆಯನ್ನು ಜಜ್ಜಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಮನೆಯ ಹಿಂಬದಿ ಕಾದು ಕುಳಿತು ಮನೆಗೆ ಮರಳುತ್ತಿದ್ದ ಅಣ್ಣ ಸ್ಟ್ಯಾನಿ ಗೋವಿಯಸ್ ತಲೆಗೆ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಸ್ಟ್ಯಾನಿ ನೀಡಿದ ದೂರಿನಂತೆ ಆರೋಪಿಯನ್ನು ಭಾನುವಾರ ಅಜೆಕಾರು ಬಳಿ ಬಂಧೀಸಲಾಯಿತು.


Spread the love