ಯುವ ಡಿಜೆ ಸಂಗೀತಗಾರ ಜಿಲ್ ಗೇವಿನ್ ನೇಣು ಬಿಗಿದು ಆತ್ಮಹತ್ಯೆ

Spread the love

ಯುವ ಡಿಜೆ ಸಂಗೀತಗಾರ ಜಿಲ್ ಗೇವಿನ್ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು: ನಗರದ ಯುವ ಡಿಜೆ ಸಂಗೀತಗಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಗರದ ಬೆಂದೂರಿನಲ್ಲಿ ನಡೆದಿದೆ

ಮೃತ ಯುವಕನನ್ನು ಬೆಂದೂರು ನಿವಾಸಿ ಜೊಸ್ಸಿ ಹಾಗೂ ಜುಲೈಟ್ ಅವರ ಪುತ್ರರಾದ ಜಿಲ್ ಗೇವಿನ್ ಡಿಸೋಜ (23) ಎಂದು ಗುರುತಿಸಲಾಗಿದೆ. ಜಿಲ್ ಅವರು ಹೆಸರಾಂತ ಕೊಂಕಣಿ ಸಂಗೀತಕಾರ ಕ್ಲೋಡ್ ಡಿಸೋಜಾ ಅವರ ಸಂಬಂದಿ ಕೂಡ ಆಗಿದ್ದಾರೆ.

ಮಾಹಿತಿಗಳ ಪ್ರಕಾರ ಜಿಲ್ ತನ್ನ ತಂದೆಯೊಂದಿಗೆ 6.30 ರ ಸುಮಾರಿಗೆ ಮಾತನಾಡಿದ್ದು, ತಂದೆ 7.30 ಕ್ಕೆ ಮನೆಗೆ ಬಂದ ಸಮಯದಲ್ಲಿ ಮನೆಯಲ್ಲಿ ಸಂಪೂರ್ಣ ಕತ್ತಲು ಆವರಿಸಿದ್ದು ಜಿಲ್ ಅವರು ಎಲ್ಲಿಯೂ ಕಾಣಿಸಲಿಲ್ಲ. ತಂದೆ ಜೊಸ್ಸಿಯವರು ಮನೆಯ ಮಹಡಿಗೆ ತೆರಳಿದಾಗ ಜಿಲ್ ಅವರು ಮಹಡಿ ಮೆಟ್ಟಿಲುಗಳ ರೇಲಿಂಗ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದರು.

ಮಾಹಿತಿಗಳ ಪ್ರಕಾರ ಜಿಲ್ ಅವರು ಆತ್ಮಹತ್ಯೆಗೂ ಮುನ್ನ ತನ್ನ ಗೆಳೆಯನಿಗೆ ದೂರವಾಣಿ ಕರೆ ಮಾಡಿದ್ದು, ಆತ ತಂದೆಗೆ ಕೂಡಲೇ ಮನೆಗೆ ಹೋಗುವಂತೆ ಸೂಚಿಸಿದ್ದ ಎನ್ನಲಾಗಿದೆ ಆದರೆ ತಂದೆ ತಲಪುವ ಮುನ್ನ ಜಿಲ್ ಪ್ರಾಣ ಹೋಗಿತ್ತು.

ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


Spread the love